ಮುಶೀರ್ ಖಾನ್ | Photo Credit : X

ಮುಂಬೈ, ಅ.28: ಒಂದೇ ಪಂದ್ಯದಲ್ಲಿ ಶತಕ ಹಾಗೂ ಐದು ವಿಕೆಟ್ ಗಳ ಗೊಂಚಲು ಪಡೆದ ಈ ಶತಮಾನದ ಮೊದಲ ಮುಂಬೈ ಆಟಗಾರ ಎಂಬ ಹೆಗ್ಗಳಿಕೆಗೆ ಮುಶೀರ್ ಖಾನ್ ಪಾತ್ರರಾಗಿದ್ದಾರೆ. ಈ ಸಾಧನೆಯೊಂದಿಗೆ ಅವರು ಬುಧವಾರ ವಿಶೇಷ ಪಟ್ಟಿಗೆ ಸೇರ್ಪಡೆಯಾದರು.

2026–27ರ ರಣಜಿ ಟ್ರೋಫಿಯಲ್ಲಿ ಹರಿಯಾಣ ವಿರುದ್ಧ ಮುಶೀರ್ ಈ ಸಾಧನೆ ಮಾಡಿದರು. 1990–91ರ ಋತುವಿನಲ್ಲಿ ಮಧ್ಯಪ್ರದೇಶದ ವಿರುದ್ಧ ರವಿ ಶಾಸ್ತ್ರಿ ಈ ಸಾಧನೆ ಮಾಡಿದ್ದರು. ಅವರ ಬಳಿಕ ಈ ಸಾಧನೆ ಮಾಡಿದ ಮುಂಬೈನ ಮೊದಲ ಆಟಗಾರ ಮುಶೀರ್.

ಮುಶೀರ್ ಅವರ ಆಲ್ರೌಂಡ್ ಆಟದ ನೆರವಿನಿಂದ ಮುಂಬೈ ತಂಡ ಉತ್ತಮ ಸ್ಥಿತಿಯಲ್ಲಿದೆ. ಮೊದಲು ಬ್ಯಾಟಿಂಗ್ನಲ್ಲಿ ಮಿಂಚಿದ ಮುಶೀರ್ 185 ಎಸೆತಗಳಲ್ಲಿ 109 ರನ್ ಗಳಿಸಿದರು. ಮುಶೀರ್ ಹಾಗೂ ಎ. ರಘುವಂಶಿ (114) ಅವರ ಶತಕಗಳ ನೆರವಿನಿಂದ ಮುಂಬೈ 430 ರನ್ ಗಳಿಸಿತು.

ಬೌಲಿಂಗ್ನಲ್ಲೂ ಮಿಂಚಿದ ಮುಶೀರ್ 85 ರನ್ ನೀಡಿ ಆರು ವಿಕೆಟ್ ಪಡೆದರು. ಇದರಿಂದ ಮುಂಬೈ ತಂಡ ಹರಿಯಾಣವನ್ನು 270 ರನ್ಗಳಿಗೆ ನಿಯಂತ್ರಿಸಿ ಫಾಲೋಆನ್ ಹೇರಲು ಸಾಧ್ಯವಾಯಿತು.

ಮುಶೀರ್ ಖಾನ್ ಅವರು ಭಾರತ ಹಾಗೂ CSK ತಂಡದ ಬ್ಯಾಟರ್ ಸರ್ಫರಾಜ್ ಖಾನ್ ಅವರ ಸಹೋದರ.

►ಮುಂಬೈ ಪರ ಒಂದೇ ಪಂದ್ಯದಲ್ಲಿ ಶತಕ ಹಾಗೂ ಐದು ವಿಕೆಟ್ ಗಳ ಗೊಂಚಲು ಪಡೆದವರು

• 1947–48: ಬಾಂಬೆಯಲ್ಲಿ ಮಹಾರಾಷ್ಟ್ರ ವಿರುದ್ಧ ಮದನ್ ರೈಜಿ

• 1948–49: ಮದ್ರಾಸ್ನಲ್ಲಿ ಮದ್ರಾಸ್ ವಿರುದ್ಧ ದತ್ತು ಫಡ್ಕರ್

• 1953–54: ಬಾಂಬೆಯಲ್ಲಿ ಮದ್ರಾಸ್ ವಿರುದ್ಧ ವಿನೂ ಮಂಕಡ್

• 1957–58: ಪುಣೆಯಲ್ಲಿ ಮಹಾರಾಷ್ಟ್ರ ವಿರುದ್ಧ ಪಾಲಿ ಉಮ್ರಿಗರ್

• 1990–91: ಇಂದೋರ್ನಲ್ಲಿ ಮಧ್ಯಪ್ರದೇಶ ವಿರುದ್ಧ ರವಿ ಶಾಸ್ತ್ರಿ

• 2026–27: ಮುಂಬೈನಲ್ಲಿ ಹರಿಯಾಣ ವಿರುದ್ಧ ಮುಶೀರ್ ಖಾನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor