ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್ ಜಯಿಸಿ ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ
ಆರ್. ಪ್ರಜ್ಞಾನಂದ | Photo Credit : Lennart Ootes / GCT
ಚೆನ್ನೈ, ಆ. 28: ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್ ಜಯಿಸಿದ ಮೊದಲ ಭಾರತೀಯ ಎನಿಸಿಕೊಂಡಿರುವ ಆರ್. ಪ್ರಜ್ಞಾನಂದ ಇತಿಹಾಸ ನಿರ್ಮಿಸಿದರು.
ಸೇಂಟ್ ಲೂಯಿಸ್ ನಲ್ಲಿ ಫ್ಯಾಬಿಯಾನೊ ಕರುವಾನಾ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರಜ್ಞಾನಂದ ಈ ಸಾಧನೆ ಮಾಡಿದರು.
ಪ್ರಜ್ಞಾನಂದ ದಿನದ ಆರಂಭದಲ್ಲಿ ಆರು ಅಂಕಗಳ ಕೊರತೆ ನೀಗಿಸಿಕೊಂಡರು. ಬ್ಲಿಟ್ಝ್ ವಿಭಾಗದಲ್ಲಿ ಆತಂಕದ ಕ್ಷಣ ಎದುರಿಸುವ ಮೊದಲು ಎರಡೂ ರ್ಯಾಪಿಡ್ ಗೇಮ್‌ಗಳನ್ನು ಗೆದ್ದುಕೊಂಡರು. ಈ ಮೂಲಕ 15-13 ಅಂತರದಿಂದ ರೋಚಕ ಗೆಲುವು ದಾಖಲಿಸಿದರು.
ಪ್ರಜ್ಞಾನಂದ ತಮ್ಮ ವೃತ್ತಿಜೀವನದಲ್ಲಿ ಅತಿದೊಡ್ಡ ಪ್ರಶಸ್ತಿ ಜಯಿಸಿದರು. ಯುವ ಗ್ರ್ಯಾಂಡ್‌ಮಾಸ್ಟರ್ 200,000 ಯುಎಸ್‌ಡಿ ಬಹುಮಾನ ಮೊತ್ತ ಗೆದ್ದಿದ್ದಾರೆ.
ಕ್ಲಾಸಿಕಲ್ ಗೇಮ್‌ಗಳ ನಂತರ ಕರುವಾನಾ ಆರು ಅಂಕಗಳ ಮುನ್ನಡೆಯೊಂದಿಗೆ ಅಂತಿಮ ದಿನ ಪ್ರವೇಶಿಸಿದರು. ಆದರೆ 21ರ ವಯಸ್ಸಿನ ಪ್ರಜ್ಞಾನಂದ ರ್ಯಾಪಿಡ್ ಹಾಗೂ ಬ್ಲಿಟ್ಝ್ ವಿಭಾಗಗಳಲ್ಲಿ ಸ್ಪರ್ಧೆಯ ದಿಕ್ಕು ಬದಲಿಸಿದರು.
ಪ್ರಜ್ಞಾನಂದ ಮೊದಲ ಕ್ಲಾಸಿಕಲ್ ಗೇಮ್‌ನ್ನು 0-6 ಅಂತರದಿಂದ ಸೋತರು. ಎರಡನೇ ಗೇಮ್ ಅನ್ನು 3-3ರಿಂದ ಡ್ರಾಗೊಳಿಸಿದರು. ಆ ನಂತರ ಎರಡೂ ರ್ಯಾಪಿಡ್ ಸ್ಪರ್ಧೆಗಳಲ್ಲಿ ಗೆದ್ದರು. ನಾಲ್ಕು ಬ್ಲಿಟ್ಝ್ ಗೇಮ್‌ಗಳಲ್ಲಿ ಸಮಬಲ ಸಾಧಿಸಿದರು.