ಸೊನಾಲ್ ದಿನುಶಾ | Photo Credit : PTI 

ಕೊಲಂಬೊ, ಆ. 28: ಮತ್ತೊಂದು ಶತಕ ಹಾಗೂ ನೂತನ ಟೆಸ್ಟ್ ದಾಖಲೆಯೊಂದಿಗೆ ಭಾರತ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಶ್ರೀಲಂಕಾದ ಯುವ ಆಟಗಾರ ಸೊನಾಲ್ ದಿನುಶಾ ಅಂತ್ಯ ಹಾಡಿದರು. ದಿನುಶಾ ಸ್ವೀಪ್ ಶಾಟ್‌ಗಳ ಮೂಲಕವೇ 176 ರನ್ ಗಳಿಸಿದ್ದು, ಟೆಸ್ಟ್ ಸರಣಿಯಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರನಾಗಿದ್ದಾರೆ.

ಎಡಗೈ ಬ್ಯಾಟರ್ ದಿನುಶಾ ಲಂಕಾದ ಎರಡನೇ ಇನಿಂಗ್ಸ್‌ ನಲ್ಲಿ ಔಟಾಗದೆ 133 ರನ್ ಗಳಿಸಿ ಎರಡನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳಲು ನೆರವಾಗಿದ್ದರು. ದಿನುಶಾ ಸರಣಿಯುದ್ದಕ್ಕೂ ಸ್ವೀಪ್ ಶಾಟ್‌ಗಳ ಮೂಲಕವೇ 176 ರನ್ ಕಲೆ ಹಾಕಿ ಇಂಗ್ಲೆಂಡ್‌ನ ಜೋ ರೂಟ್ ದಾಖಲೆಯನ್ನು ಮುರಿದರು. ರೂಟ್ 2021ರಲ್ಲಿ ಶ್ರೀಲಂಕಾದ ವಿರುದ್ಧ ಸ್ವೀಪ್ ಶಾಟ್‌ಗಳ ಮೂಲಕ 168 ರನ್ ಗಳಿಸಿದ್ದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಿನುಶಾ ಆರು ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಸರಣಿಯೊಂದರಲ್ಲಿ ಮೂರು ಶತಕಗಳನ್ನು ಗಳಿಸಿದ ಕೇವಲ ಆರನೇ ಬ್ಯಾಟರ್ ಆಗಿದ್ದಾರೆ. ಈ ಸಾಧನೆಗೈದ ಲಂಕಾದ ಮೊದಲ ಬ್ಯಾಟರ್ ಆಗಿದ್ದಾರೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈ ಸಾಧನೆಗೈದ ಮೊದಲಿಗನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor