×
Ad

ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ಅಲ್ಜೀರಿಯಾ ಫುಟ್ಬಾಲ್ ತಂಡದ ನಾಯಕ ರಿಯಾದ್ ಮಹ್ರೆಝ್ ನಿವೃತ್ತಿ

Update: 2026-07-03 23:50 IST

Photo : x@Mahrez22

ಹ್ಯೂಸ್ಟನ್, ಜು.3: ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಸ್ವಿಟ್ಸರ್ಲೆಂಡ್ ವಿರುದ್ಧ ಸೋತ ನಂತರ ಅಲ್ಜೀರಿಯಾ ಫುಟ್ಬಾಲ್ ತಂಡದ ನಾಯಕ ರಿಯಾದ್ ಮಹ್ರೆಝ್ ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದರು.

ವಾಂಕೋವರ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸ್ವಿಸ್ ತಂಡವು ಅಲ್ಜೀರಿಯಾ ತಂಡವನ್ನು 2-0 ಅಂತರದಿಂದ ಮಣಿಸಿತ್ತು.

ಪ್ರಸಕ್ತ ಸೌದಿ ಪ್ರೊ ಲೀಗ್ ತಂಡ ಅಲ್ ಅಹ್ಲಿ ಪರ ಆಡುತ್ತಿರುವ ಮಹ್ರೆಝ್, 113 ಪಂದ್ಯಗಳಲ್ಲಿ 39 ಗೋಲು ಗಳಿಸಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು.

2026ರ ವಿಶ್ವಕಪ್ ಟೂರ್ನಿಯಲ್ಲಿ ಮಹ್ರೆಝ್ ಅವರು ಆಸ್ಟ್ರಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಅಲ್ಜೀರಿಯಾ ಪರವಾಗಿ ಎರಡು ಗೋಲು ಗಳಿಸಿದ್ದರು. ಇದೀಗ ಒಂದು ದಶಕಕ್ಕೂ ಹೆಚ್ಚು ಅವಧಿಯ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News