×
Ad

ಯುಪಿ ಟಿ-20 ಲೀಗ್ ಹರಾಜಿಗೆ ಮುಹ್ಸಿನ್ ಖಾನ್ ಲಭ್ಯ

Update: 2026-07-09 20:26 IST

 ಮುಹ್ಸಿನ್ ಖಾನ್ | Photo Credit : PTI 

ಲಕ್ನೊ, ಜು.9: ಲಕ್ನೊ ಸೂಪರ್ ಜಯಂಟ್ಸ್ ತಂಡದ ಎಡಗೈ ವೇಗದ ಬೌಲರ್ ಮುಹ್ಸೀನ್ ಖಾನ್ ಕಾನ್ಪುರದ ಸೂಪರ್‌ಸ್ಟಾರ್ಸ್ಸ್‌ ತಂಡದಲ್ಲಿ ಉಳಿದುಕೊಳ್ಳದೆ ಜುಲೈ 24ರಂದು ಆಗ್ರಾದಲ್ಲಿ ನಡೆಯಲಿರುವ ಯುಪಿ ಟಿ20 ಲೀಗ್ ಮಿನಿ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ನಡೆದ ಐಪಿಎಲ್ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದ ಮುಹ್ಸೀನ್, ಉತ್ತಮ ಪ್ರದರ್ಶನ ನೀಡಿದ ಪ್ರಮುಖ ವೇಗಿಗಳ ಪೈಕಿ ಒಬ್ಬರಾಗಿದ್ದಾರೆ.

ಮುಹ್ಸೀನ್ ಕಳೆದೆರಡು ಋತುಗಳಲ್ಲಿ ಕಾನ್ಪುರ ಸೂಪರ್‌ಸ್ಟಾರ್ಸ್‌ ಪರ ಆಡಿದ್ದರು. ಕಳೆದ ವರ್ಷ ಕಾನ್ಪುರ ಫ್ರಾಂಚೈಸಿ ಮುಹ್ಸೀನ್‌ರನ್ನ ಉಳಿಸಿಕೊಂಡಿತ್ತು. ಆದರೆ, ಫಿಟ್ನೆಸ್ ಸಮಸ್ಯೆಯ ಕಾರಣದಿಂದ ಇಡೀ ಟೂರ್ನಿಯಿಂದ ವಂಚಿತರಾಗಿದ್ದರು.

2024ರ ಆವೃತ್ತಿಯ ಯುಪಿ ಟಿ20 ಲೀಗ್‌ನಲ್ಲಿ ಕಾನ್ಪುರ ಸೂಪರ್‌ಸ್ಟಾರ್ಸ್‌ ತಂಡವು ಫೈನಲ್‌ಗೆ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 11 ಪಂದ್ಯಗಳಲ್ಲಿ 6.94ರ ಇಕಾನಮಿ ರೇಟ್‌ನಲ್ಲಿ 15 ವಿಕೆಟ್‌ಗಳನ್ನು ಉರುಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News