ತಿಲಕ್ ವರ್ಮಾ | Photo Credit : PTI 

ಕ್ರೈಸ್ಟ್‌ಚರ್ಚ್, ಅ.24: ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಎಂಬ ಹೆಗ್ಗಳಿಕೆಗೆ ತಿಲಕ್ ವರ್ಮಾ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಶನಿವಾರ ಹೊಸ ವಿಶ್ವ ದಾಖಲೆ ನಿರ್ಮಿಸಿದರು.

ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ನಡೆದ ಎರಡನೇ ಟಿ-20 ಪಂದ್ಯದ ಮೊದಲ ಮೂರು ಓವರ್‌ಗಳಲ್ಲಿ ಎರಡು ಕ್ಯಾಚ್‌ಗಳನ್ನು ಪಡೆದ ತಿಲಕ್, ಟಿಮ್ ಸೀಫರ್ಟ್ ಹಾಗೂ ಡ್ಯಾರಿಲ್ ಮಿಚೆಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದರೊಂದಿಗೆ ಇಂಡೋನೇಶ್ಯ ಆಟಗಾರ ಡ್ಯಾನಿಲ್ಸನ್ ಹಾವೊ ಅವರ ದಾಖಲೆಯನ್ನು ಮುರಿದರು. ಡ್ಯಾನಿಲ್ಸನ್ 2025ರಲ್ಲಿ 25 ಕ್ಯಾಚ್‌ಗಳನ್ನು ಪಡೆದಿದ್ದರು.

ತಿಲಕ್ 2026ರಲ್ಲಿ ಫೀಲ್ಡರ್ ಆಗಿ ಒಟ್ಟು 26 ಕ್ಯಾಚ್‌ಗಳನ್ನು ಪಡೆಯುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಟಿ-20ಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್‌ಗಳು

ಕ್ಯಾಚ್‌ಗಳು    ಆಟಗಾರ             ತಂಡ              ವರ್ಷ

26         ತಿಲಕ್ ವರ್ಮಾ         ಭಾರತ                  2026

25     ಡ್ಯಾನಿಲ್ಸನ್ ಹಾವೊ     ಇಂಡೋನೇಶ್ಯ     2025

24     ಮುಹಮ್ಮದ್ ವಸೀಂ     ಯುಎಇ               2024

21     ಶರ್ವಿನ್ ಮುನಿಯಂಡಿ     ಮಲೇಶ್ಯ           2025

20    ಬ್ರಿಯಾನ್ ಮಸಬ         ಉಗಾಂಡ              2023

20      ತಂಝೀದ್ ಹಸನ್    ಬಾಂಗ್ಲಾದೇಶ          2025

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor