ಏಶ್ಯನ್ ಟಿಟಿ ಚಾಂಪಿಯನ್ಶಿಪ್: ಐತಿಹಾಸಿಕ ಪದಕ ದೃಢಪಡಿಸಿದ ಹರ್ಮೀತ್, ಯಶಸ್ವಿನಿ
Photo Credit : X
ಹೊಸದಿಲ್ಲಿ: ಭಾರತದ ಹರ್ಮೀತ್ ದೇಸಾಯಿ ಹಾಗೂ ಯಶಸ್ವಿನಿ ಘೋರ್ಷಡೆ ತಾಷ್ಕೆಂಟ್‌ನಲ್ಲಿ ನಡೆದ ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಮಿಕ್ಸೆಡ್ ಡಬಲ್ಸ್‌ನಲ್ಲಿ ಕನಿಷ್ಠ ಕಂಚಿನ ಪದಕವನ್ನು ಖಾತರಿಪಡಿಸಿದ್ದಾರೆ.
ಭಾರತೀಯ ಜೋಡಿಯು ಶುಕ್ರವಾರ ದಕ್ಷಿಣ ಕೊರಿಯಾದ ಪಾರ್ಕ್ ಗಾಂಘಿಯೊನ್ ಹಾಗೂ ಲೀ ಡಾಯುನ್‌ರನ್ನು ಕ್ವಾರ್ಟರ್ ಫೈನಲ್‌ನಲ್ಲಿ 3-2 ಅಂತರದಿಂದ ಸೋಲಿಸಿದ್ದಾರೆ. ಸೆಮಿ ಫೈನಲ್‌ಗೆ ತಲುಪಿ ಪದಕ ಖಚಿತಪಡಿಸಿರುವ ಭಾರತವು ಟೇಬಲ್ ಟೆನಿಸ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದೆ. ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 72 ವರ್ಷಗಳ ನಂತರ ಮೊದಲ ಬಾರಿ ಮಿಕ್ಸೆಡ್ ಡಬಲ್ಸ್‌ನಲ್ಲಿ ಪದಕ ಖಚಿತಪಡಿಸಿದೆ. ಭಾರತವು 1954ರಲ್ಲಿ ಕೊನೆಯ ಬಾರಿ ಪದಕ ಜಯಿಸಿತ್ತು.