ಹ್ಯಾರಿ ಬ್ರೂಕ್ | Photo Credit : AP 

ರಾವಲ್ಪಿಂಡಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಹ್ಯಾರಿ ಬ್ರೂಕ್ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ ದ್ವಿಶತಕ ದಾಖಲಿಸಿ ಇತಿಹಾಸ ನಿರ್ಮಿಸಿದರು. ಬ್ರೂಕ್ ಅವರ ದಾಖಲೆಯ ಇನಿಂಗ್ಸ್ ಶ್ರೀಲಂಕಾ ತಂಡ 2 ವಿಕೆಟ್ ಅಂತರದಿಂದ ಈ ಪಂದ್ಯ ಗೆಲ್ಲುವುದನ್ನು ತಡೆಯಲು ಸಾಧ್ಯವಾಗಿಲ್ಲ.

ಲಂಕಾ ತಂಡವು 430 ರನ್ ಗುರಿಯನ್ನು ಒಂದು ಎಸೆತ ಬಾಕಿ ಇರುವಾಗ ಗೆದ್ದುಕೊಂಡಿದೆ.

ಬ್ರೂಕ್ ಕೇವಲ 114 ಎಸೆತಗಳಲ್ಲಿ ತನ್ನ ಚೊಚ್ಚಲ ದ್ವಿಶತಕ ಪೂರೈಸಿದರು. 117 ಎಸೆತಗಳಲ್ಲಿ 200 ರನ್ ಗಳಿಸಿದ್ದ ಶುಭಮನ್ ಗಿಲ್ ದಾಖಲೆಯನ್ನು ಮುರಿದರು. 27ರ ವಯಸ್ಸಿನ ಬ್ರೂಕ್ ದ್ವಿಶತಕ ಗಳಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟರ್ ಎನಿಸಿಕೊಂಡರು. ಬೆನ್ ಸ್ಟೋಕ್ಸ್(182 ರನ್)ರಾಷ್ಟ್ರೀಯ ದಾಖಲೆಯನ್ನು ಮುರಿದರು.

ಬ್ರೂಕ್ 116 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್‌ಗಳ ಸಹಿತ 202 ರನ್ ಗಳಿಸಿ ಔಟಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor