×
Ad

Under-19 Asia Cup 2025: ಸೂರ್ಯವಂಶಿ 'ವೈಭವ'; 433/6 ರನ್ ಗಳಿಸಿ ದಾಖಲೆ ನಿರ್ಮಿಸಿದ ಭಾರತ

Update: 2025-12-12 16:16 IST

Photo| hindustantimes

ದುಬೈ, ಡಿ. 12: ಅಂಡರ್-19 ಏಷ್ಯಾ ಕಪ್‌ನಲ್ಲಿ ಭಾರತ ತಂಡ ಗುರುವಾರ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ಭಾರತ 50 ಓವರ್‌ನಲ್ಲಿ 433/6 ರನ್‌ಗಳನ್ನು ಕಲೆಹಾಕಿ ಟೂರ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ದಾಖಲಿಸಿದೆ.

ದುಬೈನ ಐಸಿಸಿ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಯುಎಇ, ಭಾರತ ತಂಡವನ್ನು  ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಆರಂಭದಿಂದಲೇ ಪ್ರಾಬಲ್ಯ ತೋರಿದ ಭಾರತೀಯ ಬ್ಯಾಟರ್ ಗಳು ಯುಎಇ ಬೌಲಿಂಗ್‌ ಮೇಲಿನ ಒತ್ತಡವನ್ನು ನಿರಂತರವಾಗಿ ಹೆಚ್ಚಿಸಿದ್ದರು. ವೈಭವ್ ಸೂರ್ಯವಂಶಿ 95 ಎಸೆತಗಳಲ್ಲಿ 171 ರನ್ (14 ಸಿಕ್ಸರ್‌) ಸಿಡಿಸಿ ಇನ್ನಿಂಗ್ಸ್‌ ಕಟ್ಟಿದರು.

ಮಧ್ಯಕ್ರಮಾಂಕದಲ್ಲಿ ಆರನ್ ಜಾರ್ಜ್ ಮತ್ತು ವಿಹಾನ್ ಮಲ್ಹೋತ್ರಾ ತಲಾ 69 ರನ್‌ಗಳ ಪರಿಣಾಮಕಾರಿ ಕೊಡುಗೆಯನ್ನು ನೀಡಿದರು. ಇನ್ನಿಂಗ್ಸ್ ಅಂತ್ಯದ ವೇಳೆ ಅಭಿಗ್ಯಾನ್ ಕುಂಡು ಮತ್ತು ಕನಿಷ್ಕ್ ಚೌಹಾಣ್ ವೇಗದ ರನ್‌ಗಳೊಂದಿಗೆ ತಂಡವನ್ನು ದಾಖಲೆಯ ಮೊತ್ತಕ್ಕೆ ತಲುಪಿಸಿದರು.

433 ರನ್‌ಗಳ ಈ ಮೊತ್ತ ಅಂಡರ್-19 ಏಷ್ಯಾ ಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ 400 ಗಡಿ ದಾಟಿದ ಇನ್ನಿಂಗ್ಸ್ ಆಗಿ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News