IND vs SA T20 | ಒಂದೇ ಓವರ್ ನಲ್ಲಿ 7 ವೈಡ್; ಅರ್ಷದೀಪ್ ಅನಗತ್ಯ ದಾಖಲೆ!
Update: 2025-12-11 20:51 IST
ಅರ್ಷದೀಪ್ | Photo Credit : PTI
ಮುಲ್ಲನಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತೀಯ ವೇಗಿ ಅರ್ಷದೀಪ್ ಸಿಂಗ್ ಅವರು ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
ಇನಿಂಗ್ಸ್ ನ 11ನೇ ಓವರ್ ನಲ್ಲಿ ಬೌಲಿಂಗ್ ಗೆ ಬಂದ ಅರ್ಷದೀಪ್, ಒಂದೇ ಓವರ್ ನಲ್ಲಿ 7 ವೈಡ್‌ಗಳನ್ನು ಎಸೆದು ಗಮನಸೆಳೆದರು.
ಇದರಿಂದ ಟಿ20 ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ ಅತಿಹೆಚ್ಚು ವೈಡ್ ಹಾಕಿದ ಬೌಲರ್ ಎಂಬ ಅಪ್ರತಿಷ್ಠಿತ ದಾಖಲೆಯು ಅವರಿಗೆ ಸೇರಿತು. ಜೊತೆಗೆ, ಒಂದೇ ಓವರ್‌ನಲ್ಲಿ 13 ಎಸೆತಗಳ ಬೌಲಿಂಗ್ ಮಾಡಿದ ದಾಖಲೆಯನ್ನು ಅವರು ಅಫ್ಗಾನಿಸ್ತಾನದ ನವೀನ್ ಉಲ್ ಹಕ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
2024ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ನವೀನ್ ಇದೇ ಮಾದರಿಯಲ್ಲಿ 13 ಎಸೆತಗಳನ್ನು ಹಾಕಿದ್ದರು. ಪಾಕಿಸ್ತಾನ ವಿರುದ್ಧ 2021ರಲ್ಲಿ 12 ಎಸೆತ ಹಾಕಿದ ದಕ್ಷಿಣ ಆಫ್ರಿಕಾದ ಸಿಸಂಡಾ ಮಗಲ ಈ ಪಟ್ಟಿಯಲ್ಲಿ ಮುಂದಿದ್ದಾರೆ.