×
Ad

Wimbledon Championships | ಜೊಕೊವಿಕ್ ಶುಭಾರಂಭ

Update: 2026-07-01 00:07 IST

ನೊವಾಕ್ ಜೊಕೊವಿಕ್ | PC : PTI

ಲಂಡನ್, ಜೂ.30: ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ವು ಯಿಬಿಂಗ್ ಅವರನ್ನು ಮಣಿಸಿದ 24 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ನೊವಾಕ್ ಜೊಕೊವಿಕ್, ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್, ಚೀನಾದ ಆಟಗಾರ ವು ಯಿಬಿಂಗ್ ಅವರನ್ನು 6-4, 5-7, 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ದಾಖಲೆಯ ಎಂಟನೇ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವತ್ತ ಮೊದಲ ಹೆಜ್ಜೆ ಇಟ್ಟರು.

39 ವರ್ಷದ ಜೊಕೊವಿಕ್, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಲು ಹಾಗೂ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಸಾರ್ವಕಾಲಿಕ ಪಟ್ಟಿಯಲ್ಲಿ ಮಾರ್ಗರೆಟ್ ಕೋರ್ಟ್ ಅವರನ್ನು ಹಿಂದಿಕ್ಕಲು ಬಯಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News