×
Ad

Venezuela ಭೂಕಂಪ | ಬ್ರೆಝಿಲ್‌ನ ಫುಟ್‌ಬಾಲ್ ತಾರೆ ನೇಮಾರ್‌ ರಿಂದ 2.36 ಕೋಟಿ ರೂ. ದೇಣಿಗೆ

Update: 2026-06-29 22:00 IST

ನೇಮರ್  |Photo Credit : PTI 

ಹೊಸದಿಲ್ಲಿ, ಜೂ. 29: ವೆನೆಝುವೆಲಾದಲ್ಲಿ ಸಂಭವಿಸಿದ ವಿನಾಶಕಾರಿ ಅವಳಿ ಭೂಕಂಪಗಳ ನಂತರದ ತುರ್ತು ರಕ್ಷಣಾ ಮತ್ತು ಮಾನವೀಯ ಪರಿಹಾರ ಕಾರ್ಯಗಳಿಗಾಗಿ ಬ್ರೆಝಿಲ್‌ನ ಫುಟ್‌ಬಾಲ್ ತಾರೆ ನೇಮಾರ್ ಜೂನಿಯರ್ 2.50 ಲಕ್ಷ ಡಾಲರ್‌ (2.36 ಕೋಟಿ ರೂ.) ದೇಣಿಗೆ ನೀಡಿದ್ದಾರೆ.

ನೇಮಾರ್ ನೀಡಿದ ಈ ದೇಣಿಗೆಯು ದುರಂತದಿಂದ ತೊಂದರೆಗೀಡಾದ ಸಾವಿರಾರು ಕುಟುಂಬಗಳಿಗೆ ಆಹಾರ, ಶುದ್ಧ ಕುಡಿಯುವ ನೀರು, ತಾತ್ಕಾಲಿಕ ಆಶ್ರಯ ಹಾಗೂ ಇತರ ತುರ್ತು ನೆರವು ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲು ಸಹಾಯ ಮಾಡಲಿದೆ ಎಂದು ಎಲ್ ಸುಮಾರಿಯೊ ವರದಿ ಮಾಡಿದೆ.

"ನನ್ನ ಹೃದಯ ವೆನೆಝುವೆಲಾದ ಜನರಿಗಾಗಿ ಮರುಗುತ್ತಿದೆ" ಎಂದು ಹೇಳಿರುವ ನೇಮಾರ್, ತಮ್ಮ ನೆರವು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ಮತ್ತು ಪರಿಹಾರವನ್ನು ನೀಡುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಅವಳಿ ಭೂಕಂಪಗಳು ವೆನೆಝುವೆಲಾದಾದ್ಯಂತ ವ್ಯಾಪಕ ವಿನಾಶವನ್ನು ಉಂಟುಮಾಡಿವೆ. ಕನಿಷ್ಠ 1,430 ಜನರು ಮೃತಪಟ್ಟಿದ್ದು, 3,238ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. 3,100ಕ್ಕೂ ಹೆಚ್ಚು ಕುಟುಂಬಗಳು ನಿರ್ವಸಿತರಾಗಿದ್ದು, ಅಂತರರಾಷ್ಟ್ರೀಯ ಮಾನವೀಯ ನೆರವು ಸಂಸ್ಥೆಗಳು ಹಾಗೂ ವಿವಿಧ ದೇಶಗಳ ಸರ್ಕಾರಗಳು ಸಹಾಯ ಹಸ್ತ ಚಾಚಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News