×
Ad

ಅಮೆರಿಕನ್ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್ | ಸು-ಲಿ ಯಾಂಗ್ ಚಾಂಪಿಯನ್, ಕಿಡಂಬಿ ಶ್ರೀಕಾಂತ್ ರನ್ನರ್ಸ್ ಅಪ್

Update: 2026-06-29 21:07 IST

ಕಿಡಂಬಿ ಶ್ರೀಕಾಂತ್ | Photo Credit : @BAI_Media

ಹೊಸದಿಲ್ಲಿ, ಜೂ.29: ಯುಎಸ್ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಚೈನೀಸ್ ತೈಪೆಯ ಸು ಲಿ-ಯಾಂಗ್ ವಿರುದ್ಧ ಸೋತ ಭಾರತದ ಹಿರಿಯ ಆಟಗಾರ ಕಿಡಂಬಿ ಶ್ರೀಕಾಂತ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ ಮೊದಲ ಗೇಮ್‌ ನಲ್ಲಿ ಸೋತ ನಂತರ ಸ್ಪೂರ್ತಿಯುತ ಮರುಹೋರಾಟ ನೀಡಿದರು. ಆದರೆ ಅಂತಿಮವಾಗಿ 15-21, 21-16, 9-21 ಗೇಮ್‌ ಗಳ ಅಂತರದಿಂದ ಸೋತಿದ್ದಾರೆ.

ಈ ವರ್ಷ ಮೊದಲ ಫೈನಲ್ ಪಂದ್ಯವನ್ನು ಆಡಿದ ಶ್ರೀಕಾಂತ್, ಒಂದು ಗಂಟೆಯೊಳಗೆ ನಡೆದ ಹಣಾಹಣಿಯಲ್ಲಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಅನಗತ್ಯ ತಪ್ಪುಗಳ ಮೂಲಕ ತಮ್ಮ ಲಯವನ್ನು ಕಳೆದುಕೊಂಡರು.

ಶ್ರೀಕಾಂತ್ ಮೊದಲ ಗೇಮ್ ಅನ್ನು 15-21 ಅಂತರದಿಂದ ಸೋತರು. ಎರಡನೇ ಗೇಮ್‌ ನಲ್ಲಿ ತಿರುಗೇಟು ನೀಡಿದ ಶ್ರೀಕಾಂತ್ 21-16 ಅಂತರದಿಂದ ಜಯಶಾಲಿಯಾದರು. ಆದರೆ ಮೂರನೇ ಹಾಗೂ ಕೊನೆಯ ಗೇಮ್‌ ನಲ್ಲಿ 9-21 ಅಂತರದಿಂದ ಸೋತರು. ಕೊನೆಯ ಗೇಮ್‌ ನಲ್ಲಿ ಪ್ರಾಬಲ್ಯ ಸಾಧಿಸಿದ ಸು ಲಿ-ಯಾಂಗ್, ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ನಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದರು. ಶ್ರೀಕಾಂತ್ ಮತ್ತೊಮ್ಮೆ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News