18 ಡಿವೈಎಸ್‍ಪಿ, 69 ಇನ್ಸ್ಪೆಕ್ಟರ್ಗಳ ವರ್ಗಾವಣೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಸರಕಾರವು 18 ಡಿವೈಎಸ್‍ಪಿ ಅಧಿಕಾರಿಗಳನ್ನು ಹಾಗೂ ವಿವಿಧ ವಿಭಾಗಗಳಲ್ಲಿದ್ದ 69 ಇನ್ಸ್ ಪೆಕ್ಟರ್ ಗಳನ್ನು ಸಿಸಿಬಿ, ಲೋಕಾಯುಕ್ತ, ಸಿಐಡಿ, ಡಿಸಿಆರ್ ಇ, ರಾಜ್ಯ ಗುಪ್ತವಾರ್ತೆ ಸೇರಿ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಡಿವೈಎಸ್‍ಪಿಗಳ ವರ್ಗಾವಣೆ: ಸಿಐಡಿಯಲ್ಲಿದ್ದ ರವಿ ಎಚ್. ಅವರನ್ನು ಬೆಂಗಳೂರು ಸಿಟಿ ಸ್ಪೆಷಲ್ ಬ್ರಾಂಚ್‍ಗೆ(ಎಸ್.ಬಿ.), ಉಡುಪಿ ಜಿಲ್ಲೆಯ ಸಿಇಎನ್‍ನಲ್ಲಿರುವ ಲೋಕೇಶ್ ಎ.ಸಿ., ದಾಂಡೇಲಿ ಉಪ ವಿಭಾಗ ಶಿವಾನಂದ ಎನ್ ಮದರಖಂಡಿ, ರಾಜ್ಯ ಗುಪ್ತವಾರ್ತೆಯಲ್ಲಿರುವ ಅಯ್ಯನಗೌಡ ಪಾಟೀಲ್ ಟಿ. ಮತ್ತು ಪ್ರತಾಪ್ ಸಿಂಗ್ ಥೋರಾಟ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ(ಡಿಸಿಆರ್ ಇ) ವರ್ಗಾವಣೆ ಮಾಡಲಾಗಿದೆ.
ರಾಜ್ಯ ಗುಪ್ತವಾರ್ತೆಯಲ್ಲಿರುವ ಮಲ್ಲೇಶಪ್ಪ ಮಲ್ಲಾಪುರ ಹಾಗೂ ಜಗದೀಶ್ ಎಚ್.ಎಸ್. ಮತ್ತು ಸಿಐಡಿಯಲ್ಲಿರುವ ಮುತ್ತಪ್ಪ ಎಸ್ ಪಾಟೀಲ್ ಅವರನ್ನು ಕರ್ನಾಟಕ ಲೋಕಾಯುಕ್ತ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯ ಗುಪ್ತವಾರ್ತೆಯಲ್ಲಿರುವ ಲತಾ ಬಿ.ಕೆ. ಅವರನ್ನು ದಾವಣಗೆರೆ ಪೂರ್ವ ವಲಯದ ಐಜಿಪಿ ಕಚೇರಿಗೆ, ದಾವಣಗೆರೆ ಪೂರ್ವ ವಲಯದ ಐಜಿಪಿ ಕಚೇರಿಯಲ್ಲಿರುವ ಕೃಷ್ಣಮೂರ್ತಿ ಕೆ. ಅವರನ್ನು ಡಿಸಿಆರ್ ಇ ವರ್ಗಾವಣೆ ಮಾಡಲಾಗಿದೆ.
ಹೊಳೆನರಸೀಪುರ ಉಪ ವಿಭಾಗದಲ್ಲಿರುವ ಮುಹಮ್ಮದ್ ಹಶ್ಮತ್ ಖಾನ್ ಅವರನ್ನು ಕಲಬುರಗಿ ಪಿಟಿಸಿಗೆ, ಸಿಐಡಿಯಲ್ಲಿರುವ ಎಂ.ಎಸ್ ನಾಯ್ಕರ್ ಅವರನ್ನು ಬೆಳಗಾವಿಯ ಗ್ರಾಮೀಣ ಉಪವಿಭಾಗಕ್ಕೆ, ಬೆಳಗಾವಿ ಗ್ರಾಮೀಣ ಉಪ ವಿಭಾಗದಲ್ಲಿದ್ದ ಗಂಗಾಧರ್ ಬಿ.ಎಂ. ಅವರನ್ನು ಡಿಸಿಆರ್ ಇ ವರ್ಗಾವಣೆ ಮಾಡಲಾಗಿದೆ.
ಲೋಕಾಯುಕ್ತ ಕಚೇರಿಯಲ್ಲಿರುವ ಸುನೀಲ್ ವೈ ನಾಯ್ಕ ಅವರನ್ನು ಬೆಂಗಳೂರು ಸಿಸಿಬಿಗೆ, ಬೆಂಗಳೂರು ಸಿಸಿಬಿಯಲ್ಲಿರುವ ನಾಗರಾಜ್ ಎಂ.ಎನ್. ಅವರನ್ನು ಡಿಸಿಆರ್ ಇಗೆ, ವೈಟ್ ಫೀಲ್ಡ್ ವಿಭಾಗದ ಸಿಸಿಪಿಎಸ್ ಕಚೇರಿಯಲ್ಲಿರುವ ಬಾಲಕೃಷ್ಣ ಸಿ. ಅವರನ್ನು ಹಲಸೂರು ಉಪವಿಭಾಗಕ್ಕೆ, ಮಂಡ್ಯ ಜಿಲ್ಲೆಯ ಸಿಸಿಪಿಎಸ್ ಕಚೇರಿಯಲ್ಲಿರುವ ಜಿ.ಆರ್. ಶಿವಮೂರ್ತಿ ಅವರನ್ನು ಚನ್ನರಾಯಪಟ್ಟಣ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಭಟ್ಕಳ ಉಪ ವಿಭಾಗದಿಂದ ವರ್ಗಾವಣೆಗೊಂಡು ಸ್ಥಳ ನಿರೀಕ್ಷಣೆಯಲ್ಲಿರುವ ಗಿರೀಶ್ ಬಿ. ಅವರನ್ನು ಬೆಂಗಳೂರು ಸಿಟಿ ಸ್ಪೆಷಲ್ ಬ್ರಾಂಚ್‍ಗೆ ವರ್ಗಾವಣೆ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಇನ್ಸ್ ಪೆಕ್ಟರ್ ಳಾದ ದೀಪಕ್ ಕುಮಾರ್ ಕೆ.ಎಚ್, ಮಹದೇವಯ್ಯ, ಸತೀಶ ಕೆ.ಜಿ, ಲಕ್ಷ್ಮೀಪತಿ ಕೆ. ಸುಮಾ ಮಂಜುನಾಥ್, ಗುರು ಪ್ರಸಾದ್, ದಿನೇಶ್ ಪಾಟೀಲ್, ಕಿರಣ್ ಕುಮಾರ್ ಇ.ವೈ., ಶ್ರೀನಿವಾಸ್ ರಾವ್ ಎಂ., ಮಲ್ಲಿಕಾರ್ಜುನ್ ಬಿ., ಶೇಖರ್ ಜಿ., ಜಯಪಾಲ್ ಎ ಪಾಟೀಲ್, ಸುನೀಲ್ ಕುಮಾರ್ ಎಚ್.ಎಸ್., ಜಗದೇವಪ್ಪ, ಗುಡ್ಡಪ್ಪ ಎನ್., ರಾಯಗೊಂಡ ಎಸ್ ಜನ್ನಾರ್, ಮರುಳಸಿದ್ದಪ್ಪ ಆರ್ ದೊಡ್ದಬಸಪ್ಪ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಪ್ರಮೋದ್ ಕುಮಾರ್, ಮಂಜುನಾಥ್ ಎಂ., ಮಹೇಶ್ ಎನ್.ವಿ. ಅವರನ್ನು ಸಿಐಡಿಗೆ, ಹನುಮಂತರಾಜು ಎಂ, ಶಬರೀಶ್ ವಿ.ಎಸ್, ಶ್ರೀನಿವಾಸ್ ಬಿ.ಎಂ. ಜಯರತ್ನ ಎಂ, ರಾಘವೇಂದ್ರ ಎಚ್ ಹಳ್ಳೂರು, ಸಿರಾಜುದ್ದೀನ್ ಇ.ಐ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ.
ಹಜರೇಶ್ ಎ ಕಿಲ್ಲೇದಾರ್, ವೀರೇಂದ್ರ ಪ್ರಸಾದ್ ಎಸ್.ಆರ್, ಅಶೋಕ್ ಬಿ.ಎಸ್ ಅವರನ್ನು ಬೆಂಗಳೂರು ನಗರ ಸಿಸಿಬಿಗೆ ನೇಮಿಸಲಾಗಿದೆ. ರವಿಶಂಕರ್ ಎಂ.ಎನ್ ಅವರನ್ನು ವೈಯ್ಯಾಲಿಕಾವಲ್ ಠಾಣೆಗೆ ಹಾಗೂ ಲಕ್ಷ್ಮಯ್ಯ ಎಂ.ಬಿ ಅವರನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.ನಾರಾಯಣಸ್ವಾಮಿ ಜಿ ಅವರನ್ನು ಹೈಗ್ರೌಂಡ್ಸ್ ಸಂಚಾರ ಠಾಣೆಗೆ ಮತ್ತು ಮಹೇಶ್ ಇ.ಎಸ್ ಅವರನ್ನು ಜೀವನ್ ಭೀಮಾನಗರ ಸಂಚಾರ ಠಾಣೆಗೆ ಹೀಗೆ ಒಟ್ಟು 69 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ.