×
Ad

ಹಾಸನ: ಸ್ಮಶಾನ ಇಲ್ಲದ ಕಾರಣ ಮನೆಯಲ್ಲೇ ಮೃತದೇಹ ಹೂಳಲು ಮುಂದಾದ ದಲಿತ ಕುಟುಂಬ

Update: 2023-07-22 23:04 IST

ಅರಕಲಗೂಡು, ಜು.22: ಮೃತದೇಹ ಹೂಳಲು ಜಾಗ ಇಲ್ಲ ಎಂಬ ಕಾರಣಕ್ಕೆ ಕುಟುಂಬವೊಂದು ಮನೆ ಮುಂದೆಯೇ ಮೃತದೇಹ ಹೂಳಲು ಮುಂದಾದ ಘಟನೆ ತಾಲೂಕಿನ ಶಂಭುನಾಥಪುರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಗ್ರಾಮದ ಗಿಡ್ಡಯ್ಯ (54) ಎಂಬವರು ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ದಲಿತ ಕುಟುಂಬಗಳಿಗೆ ಸ್ಮಶಾನ ಭೂಮಿಯೇ ಇಲ್ಲ, ಸ್ಮಶಾನ ಭೂಮಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಈವರೆಗೂ ಮಂಜೂರಾತಿ ಎಂಬುದು ಮರೀಚಿಕೆಯಾಗಿದೆ ಎನ್ನಲಾಗಿದೆ.

ಮೃತವ್ಯಕ್ತಿಯನ್ನು ಮನೆ ಮುಂದೆಯೇ ಅಂತ್ಯಸಂಸ್ಕಾರ ನಡೆಸಲು ದಲಿತ ಕುಟುಂಬ ಸಿದ್ಧತೆ ನಡೆಸಿತ್ತು. ಸುದ್ದಿ ತಿಳಿದ ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಮನೆ ಎದುರು ಅಂತ್ಯಸಂಸ್ಕಾರ ನಡೆಸುವುದನ್ನು ತಡೆದು, ಸರಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ಮಾಡಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News