×
Ad

‘ಧರ್ಮಸ್ಥಳ ಪ್ರಕರಣ’ ತನಿಖೆ ಇನ್ನೂ ಪೂರ್ಣಗೊಂಡಿಲ್ಲ : ಪ್ರಣಬ್ ಮೊಹಾಂತಿ

Update: 2025-12-05 20:02 IST

 ಪ್ರಣಬ್ ಮೊಹಾಂತಿ

ಬೆಂಗಳೂರು : ಧರ್ಮಸ್ಥಳ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸರಕಾರಕ್ಕೆ ಸಲ್ಲಿಕೆ ಆಗಿರುವುದು ಈವರೆಗಿನ ವರದಿ ಮಾತ್ರ, ದೋಷಾರೋಪ ಪಟ್ಟಿ(ಚಾರ್ಜ್‍ಶೀಟ್) ಅಲ್ಲ ಎಂದು ಎಸ್‍ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಅಂತಿಮ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ ಅಥವಾ ಸಿದ್ಧಗೊಂಡಿದೆ ಎಂದು ಹೇಳಿದವರ್ಯಾರು? ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗ ಸಲ್ಲಿಕೆ ಆಗಿರುವುದು ದೋಷಾರೋಪ ಪಟ್ಟಿ ಅಲ್ಲ, ತನಿಖೆಯ ವರದಿ ಅಷ್ಟೇ ಎಂದರು.

ಈ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಮಾತ್ರ ಗುರಿಯಾಗಿಸಿ ಬಂಧಿಸಲಾಯಿತು, ಇದಕ್ಕೆ ಸಂಬಂಧಿಸಿದ ಉಳಿದವರನ್ನೇಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಣಬ್ ಮೊಹಾಂತಿ, ಎಲ್ಲರನ್ನು ಬಂಧನ ಮಾಡುವುದೇ ತನಿಖೆಯಲ್ಲ. ಸದ್ಯ ಪ್ರಕರಣದ ತನಿಖೆ ಉತ್ತಮ ಹಂತದಲ್ಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News