×
Ad

ಡೆತ್ ನೋಟ್ ಬರೆದಿಟ್ಟು ಹೋಟೆಲ್ ನಲ್ಲಿ ಯುವಕ ಆತ್ಮಹತ್ಯೆ

Update: 2023-07-06 22:41 IST

ಪಾವಗಡ, ಜು.6: ಯುವಕನೋರ್ವ ಹೋಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡ ಪಟ್ಟಣದಲ್ಲಿ ಗುರುವಾರ ವರದಿಯಾಗಿದೆ. 

ಮೃತ ಯುವಕನನ್ನು ತಾಲೂಕಿನ ವೈ ಎನ್ ಹೊಸಕೋಟೆ ಮೂಲದ ಗೋವಿಂದಪ್ಪ ಎಂಬುವವರ ಮಗನಾದ ಮಂಜುನಾಥ್ (27) ಎಂದು ಗುರುತಿಸಲಾಗಿದೆ. 

ಮಂಜುನಾಥ್ ಬುಧವಾರ ತಡರಾತ್ರಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. 

ಈ ಸಂಬಂಧ ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್ ನೋಟ್ ವೈರಲ್: ತನ್ನ ಅಣ್ಣನಿಗೆ ಬರೆದ ಪತ್ರವನ್ನು ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ಎನ್ನಲಾಗಿದ್ದು, ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದಿರುವುದಾಗಿ ಅದರಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News