×
Ad

ಜೈಲಿನಿಂದ ದರ್ಶನ್ ವಿಡಿಯೋ ಕರೆ | ಟೆಲಿಕಾಂ ಕಂಪೆನಿಗಳಿಗೆ ನೋಟಿಸ್ ನೀಡಿ ವರದಿ ಸಲ್ಲಿಸಲು ಸೂಚನೆ

Update: 2024-08-31 19:30 IST

ದರ್ಶನ್‌ (PC :x/@dasadarshan)

ಬೆಂಗಳೂರು : ಜೈಲಿನಿಂದ ನಟ ದರ್ಶನ್ ವಿಡಿಯೋ ಕರೆಯಲ್ಲಿ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮರ್ ಅಳವಡಿಸಿದ್ದರೂ ನೆಟ್‍ವರ್ಕ್ ಹೇಗೆ ಲಭ್ಯವಾಯಿತು ಎಂಬುದರ ಕುರಿತು ಟೆಲಿಕಾಂ ಕಂಪೆನಿಗಳಿಂದ ವಿವರ ಪಡೆದು ವರದಿ ಸಲ್ಲಿಸುವಂತೆ ಕಾರಾಗೃಹದ ಮುಖ್ಯ ಅಧೀಕ್ಷರಿಗೆ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಪತ್ರ ರವಾನಿಸಿದ್ದಾರೆ.

ಆ.25ರಂದು ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ ಜೈಲಿನಲ್ಲಿರುವ ಆರೋಪಿ ದರ್ಶನ್ ವಿಡಿಯೋ ಕರೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈಗಾಗಲೇ ಯಾವುದೇ ನೆಟ್‍ವರ್ಕ್ ಸಿಗ್ನಲ್‍ಗಳು ದೊರಕದಂತೆ ಜಾಮರ್ ಉಪಕರಣಗಳನ್ನು ಅಳವಡಿಸಲಾಗಿದೆ.

ಕಾರಾಗೃಹದ ಎಲ್ಲ ಬ್ಯಾರಕ್, ಸೆಲ್, ಆವರಣಗಳನ್ನು ಪ್ರತಿದಿನ ಪರಿಶೀಲನೆ ನಡೆಸಲಾಗುತ್ತಿದ್ದು, ಯಾವುದೇ ಸಿಗ್ನಲ್‍ಗಳು ಲಭ್ಯವಾಗುತ್ತಿಲ್ಲ. ಅದಾಗ್ಯೂ ಸಹ ಆರೋಪಿ ದರ್ಶನ್ ವಿಡಿಯೋ ಕರೆಯಲ್ಲಿ ಭಾಗಿಯಾಗಿರುವುದು ಹಾಗೂ ಫೋಟೋ ಹಂಚಿಕೊಂಡಿರುವುದು ಗಂಭೀರ ವಿಷಯವಾಗಿದೆ. ಹಾಗೂ ಕಾರಾಗೃಹದಲ್ಲಿ ಮೊಬೈಲ್ ಸಿಗ್ನಲ್ ದೊರಕುತ್ತಿರುವುದು ಕಂಡು ಬಂದಿದೆ.

ಆದ್ದರಿಂದ ಎಲ್ಲಾ ಟೆಲಿಕಾಂ ಕಂಪೆನಿಗಳಿಗೆ ನೋಟಿಸ್ ನೀಡಿ ಸಿಗ್ನಲ್ ಹೇಗೆ ದೊರೆಯಿತು ಎಂಬುದರ ವಿವರಣೆ ಪಡೆದು ಸೆಪ್ಟೆಂಬರ್ 4ರೊಳಗಡೆ ವರದಿ ನೀಡಬೇಕು ಎಂದು ಪತ್ರದ ಮೂಲಕ ಕಾರಾಗೃಹ ಇಲಾಖೆಯ ಮುಖ್ಯ ಅಧೀಕ್ಷರಿಗೆ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News