ಪಿಜಿ ಆಯುಷ್ ಕೋರ್ಸ್‍ಗಳ ಪ್ರವೇಶ: ಅರ್ಜಿ ಸಲ್ಲಿಕೆಗೆ ನ.10 ಕೊನೆಯ ದಿನ
ಸಾಂದರ್ಭಿಕ ಚಿತ್ರ
ಬೆಂಗಳೂರು : 2025ನೆ ಸಾಲಿನ ಸ್ನಾತಕೋತ್ತರ ಆಯುಷ್ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಆನ್ ಲೈನ್ ಮೂಲಕ ಅರ್ಜಿ ಕರೆದಿದೆ. ಎಐಎಪಿಜಿಇಟಿ-2025ರಲ್ಲಿ ಅರ್ಹತೆ ಪಡೆದಿರುವ ಆಸಕ್ತ ಅಭ್ಯರ್ಥಿಗಳು ನ.10ರ ಸಂಜೆ 4 ರೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ನೋಂದಣಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 2 ಸಾವಿರ ರೂ.ಇದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 1 ಸಾವಿರ ರೂ.ನಿಗದಿಪಡಿಸಲಾಗಿದೆ. ಇದನ್ನು ನ.10ರ ಸಂಜೆ 6 ರೊಳಗೆ ಆನ್ ಲೈನ್ ಮೂಲಕ ಪಾವತಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ವೇಳಾಪಟ್ಟಿ, ದಾಖಲಾತಿ ಪರಿಶೀಲನೆ, ಸಲ್ಲಿಸಬೇಕಾದ ಮೂಲ ದಾಖಲಾತಿಗಳು ಮತ್ತಿತರ ಮಾಹಿತಿಯನ್ನು http://kea.kar.nic.in ನಲ್ಲಿ ಗಮನಿಸಬಹುದು. ಎಐಎಪಿಜಿಇಟಿ-25ರ ಮಾಹಿತಿ ಪುಸ್ತಕದಲ್ಲಿ ನೀಡಿರುವ ಅರ್ಹತಾ ಷರತ್ತುಗಳು ಹಾಗೂ ಇನ್ನಿತರ ಮಾಹಿತಿಯನ್ನೂ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.