ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಸಿಎಂ ಆದೇಶ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಹಾಗೂ ಸಚಿವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಈ ಕೆಳಕಂಡ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್-ತುಮಕೂರು, ಸಚಿವರಾದ ಕೆ.ಜೆ.ಜಾರ್ಜ್-ಚಿಕ್ಕಮಗಳೂರು, ಕೆ.ಎಚ್.ಮುನಿಯಪ್ಪ-ಬೆಂಗಳೂರು ಗ್ರಾಮಾಂತರ, ರಾಮಲಿಂಗಾರೆಡ್ಡಿ-ಕೋಲಾರ, ಎಂ.ಬಿ.ಪಾಟೀಲ್-ವಿಜಯಪುರ, ಕೃಷ್ಣಬೈರೇಗೌಡ-ಬೆಂಗಳೂರು ನಗರ, ಸತೀಶ್ ಜಾರಕಿಹೊಳಿ-ಬೆಳಗಾವಿ, ಯು.ಟಿ. ಖಾದರ್-ದಕ್ಷಿಣ ಕನ್ನಡ.
ಪ್ರಿಯಾಂಕ್ ಖರ್ಗೆ-ಕಲಬುರಗಿ, ಈಶ್ವರ್ ಖಂಡ್ರೆ-ಬೀದರ್, ಡಾ.ಶರಣ ಪ್ರಕಾಶ್ ಪಾಟೀಲ್-ಯಾದಗಿರಿ, ಬಸವರಾಜ ರಾಯರೆಡ್ಡಿ-ಗದಗ, ಎನ್.ಚಲುವರಾಯಸ್ವಾಮಿ-ಮಂಡ್ಯ, ಬಿ.ಎಸ್.ಸುರೇಶ್-ಚಿಕ್ಕಬಳ್ಳಾಪುರ, ಡಾ.ಯತೀಂದ್ರ ಸಿದ್ದರಾಮಯ್ಯ-ಮೈಸೂರು, ಸಂತೋಷ್ ಲಾಡ್-ಧಾರವಾಡ, ಶಿವರಾಜ್ ತಂಗಡಗಿ-ಕೊಪ್ಪಳ.
ಎಸ್.ಎಸ್.ಮಲ್ಲಿಕಾರ್ಜುನ್-ದಾವಣಗೆರೆ, ಸಿ.ಪುಟ್ಟರಂಗಶೆಟ್ಟಿ-ಚಾಮರಾಜನಗರ, ಮಧು ಬಂಗಾರಪ್ಪ-ಶಿವಮೊಗ್ಗ, ರುದ್ರಪ್ಪ ಲಮಾಣಿ-ಹಾವೇರಿ, ಬಿ.ನಾಗೇಂದ್ರ-ಬಳ್ಳಾರಿ, ಲಕ್ಷ್ಮಣ ಸವದಿ-ಉತ್ತರ ಕನ್ನಡ, ಪಿ.ಎಂ.ನರೇಂದ್ರ ಸ್ವಾಮಿ-ಕೊಡಗು, ಕೆ.ಎಂ.ಶಿವಲಿಂಗೇಗೌಡ-ಹಾಸನ, ವಿಜಯಾನಂದ ಕಾಶಪ್ಪನವರ್-ಬಾಗಲಕೋಟೆ.
ಎಚ್.ಸಿ.ಬಾಲಕೃಷ್ಣ-ಬೆಂಗಳೂರು ದಕ್ಷಿಣ, ಡಾ.ಅಜಯ್ ಸಿಂಗ್-ರಾಯಚೂರು, ರಿಝ್ವಾನ್ ಅರ್ಶದ್-ಉಡುಪಿ, ಟಿ.ರಘುಮೂರ್ತಿ-ಚಿತ್ರದುರ್ಗ ಹಾಗೂ ಕೆ.ಎಸ್.ಬಸವಂತಪ್ಪ ಅವರನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.