ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕಕ್ಕೆ ಎಚ್. ಎನ್.ಧರ್ಮೇಂದ್ರ, ಶ್ಲಾಘನೀಯ ಸೇವಾ ಪದಕಕ್ಕೆ 17 ಮಂದಿ ಪೊಲೀಸ್ ಸಿಬ್ಬಂದಿ ಆಯ್ಕೆ

Update: 2026-08-14 20:07 IST

ಬೆಂಗಳೂರು : ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕಕ್ಕೆ ಬೆಂಗಳೂರು ನಗರದ ಕೆಂದ್ರ ಅಪರಾಧ ವಿಭಾಗದ(ಸಿಸಿಬಿ) ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ಎಚ್.ಎನ್.ಧರ್ಮೇಂದ್ರ ಆಯ್ಕೆಯಾಗಿದ್ದು, ಶ್ಲಾಘನೀಯ ಸೇವಾ ಪದಕಕ್ಕೆ 17 ಮಂದಿ ಪೊಲೀಸ್ ಸಿಬ್ಬಂದಿಗಳು ಭಾಜನರಾಗಿದ್ದಾರೆ.

ಶ್ಲಾಘನೀಯ ಸೇವಾ ಪದಕಕ್ಕೆ ಬೆಂಗಳೂರು ರೈಲ್ವೇಸ್‍ನ ಪೊಲೀಸ್ ಅಧೀಕ್ಷಕಿ(ಎಸ್‍ಪಿ) ಸಾರಾ ಫಾತಿಮಾ, ಕೆಎಸ್‍ಆರ್‍ಪಿ 9ನೇ ಪಡೆಯ ಕಮಾಂಡೆಂಟ್ ಥಾಮಸ್ ಮ್ಯಾಥ್ಯೂ ಪಿ.ಎಂ., ಬೆಂಗಳೂರು ನಗರ ಆಗ್ನೇಯ ಸಂಚಾರ ಉಪ ವಿಭಾಗದ ಎಸಿಪಿಯಾದ ಟಿ. ಮಹಾದೇವ, ರಾಯಚೂರು ಜಿಲ್ಲೆಯ ಡಿಎಆರ್‍ನ ಡಿವೈಎಸ್‍ಪಿ ಪ್ರಮಾನಂದ್ ಪಿ. ಘೋಡ್ಕೆ, ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಇನ್ಸ್‌ ಪೆಕ್ಟರ್ ಕೆ. ಷಣ್ಮುಗ ವರ್ಮಾ, ಬೆಳಗಾವಿ ನಗರ ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ ಪೆಕ್ಟರ್ ಬಾವುದ್ದೀನ್ ರುಕ್ಮುದ್ದೀನ್ ಗಡೇಕರ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಸಿಐಡಿಯ ಪೊಲೀಸ್ ಇನ್ಸ್‌ ಪೆಕ್ಟರ್ ಗುರುಪ್ರಸಾದ್ ಗೋಪಾಲ ನಾಯಕ್, ಲೋಕಭವನ ರಿಸರ್ವ್ ಪೊಲೀಸ್ ಇನ್ಸ್‌ ಪೆಕ್ಟರ್ ನಯೀಮ್ ಎಂ. ಹಾಗೂ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಸಬ್‍ ಇನ್ಸ್‌ ಪೆಕ್ಟರ್ ಶ್ರೀನಿವಾಸ ಎಂ., ಕೆಎಸ್‍ಆರ್‍ಪಿ 3ನೇ ಪಡೆಯ ಎಆರ್‍ಎಸ್‍ಐ ಜ್ಞಾನದೇವ್ ನವಲ ತಾರಸೆ, ವಿಧಾನಸೌಧ ಭದ್ರತೆ ವಿಭಾಗದ ಮಹಾದೇವಸ್ವಾಮಿ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಕೆಜಿಎಫ್‍ನ ಮಾರಿಯಾ ಜೋಸೆಫ್ ದಿನೇಶ್ ಕುಮಾರ್ ಎಫ್. ಹಾಗೂ ಕೆಎಸ್‍ಆರ್‍ಪಿ 4ನೆ ಪಡೆಯ ಆರ್‌ ಎಚ್‍ಸಿ ಚಂದ್ರಶೇಖರ ಜಿ. ಚಿಕ್ಕಣ್ಣನವರ್, ತರೀಕೆರೆ ಉಪ ವಿಭಾಗದ ಸಿಎಚ್‍ಸಿ ಅಬ್ದುಲ್ ಕಮಾಲ್ ಅಬ್ದುಲ್ ಹಮೀದ್, ಸಿಐಡಿಯ ಎಎಚ್‍ಸಿ ನಾಗೇಶ್ ಮಂಚಯ್ಯ, ಹುಣಸೂರು ಟೌನ್ ಪೊಲೀಸ್ ಠಾಣೆಯ ಎಸ್.ಎ. ಮನೋಹರ, ಚಿಕ್ಕಮಗಳೂರು ಜಿಲ್ಲೆಯ ಡಿಪಿಒನ ಎಪಿಸಿ ಅಬ್ದುಲ್ ರಬ್ಬಾನಿ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News