×
Ad

ಬೆಂಗಳೂರು | ಮಾನವ ಕಳ್ಳಸಾಗಣಿಕೆ ಚಟುವಟಿಕೆ: 14 ಆರೋಪಿಗಳ ಬಂಧನ, 20 ಮಹಿಳೆಯರ ರಕ್ಷಣೆ

Update: 2023-10-31 23:21 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.31: ನಗರದಲ್ಲಿ ಮಾನವ ಕಳ್ಳಸಾಗಣಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ 20 ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ತಿಂಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ನಗರದ ಬಾಗಲಗುಂಟೆ, ವರ್ತೂರು, ಕೆ.ಆರ್.ಪುರಂ, ವಿದ್ಯಾರಣ್ಯಪುರ, ಅಮೃತಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬಾಂಗ್ಲಾದೇಶ ಮೂಲದ ನಾಲ್ವರು, ಪಶ್ಚಿಮ ಬಂಗಾಳದ ಹನ್ನೊಂದು, ಕರ್ನಾಟಕದ ಮೂವರು, ತೆಲಂಗಾಣ ಹಾಗೂ ಉತ್ತರಾಖಂಡ್ ಮೂಲದ ತಲಾ ಓರ್ವ ಮಹಿಳೆಯರನ್ನು ರಕ್ಷಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಒಟ್ಟಾರೆ 14 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಬಂಧಿತರಿಂದ 4 ದ್ವಿಚಕ್ರ ವಾಹನ, 1 ಕಾರು, 40 ಮೊಬೈಲ್‍ ಫೋನ್‍ಗಳು, 2 ಲ್ಯಾಪ್‍ಟಾಪ್‍ಗಳು, 3 ವಿವಿಧ ಕಂಪೆನಿಯ ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದರು.

‘ವೇಶ್ಯಾವಾಟಿಕೆ ದಂಧೆಯ ಖಚಿತ ಮಾಹಿತಿ ಆಧರಿಸಿ, ನಗರದ ಬೋಗಾದಿ ಹಾಗೂ ಬಸವೇಶ್ವರ ನಗರದ ಆಶ್ರಯ ಮನೆಯ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು, ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ, ಬಂಧಿತರಿಂದ ನಾಲ್ಕು ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದಾರೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News