×
Ad

ಬೆಂಗಳೂರು | ಹಾಡಹಗಲೇ ಬಿಎಂಡಬ್ಲ್ಯೂ ಕಾರಿನ ಗಾಜನ್ನು ಒಡೆದು ಲಕ್ಷಾಂತರ ರೂ. ದರೋಡೆ; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

Update: 2023-10-23 13:59 IST

ಬೆಂಗಳೂರು: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಹಾಡಹಗಲೇ ಬಿಎಂಡಬ್ಲ್ಯೂ ಕಾರಿನ ಗಾಜನ್ನು ಒಡೆದು 13 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ನಗರದ ಸಜಾರ್ಪುರ ಬಳಿ ವರದಿಯಾಗಿದೆ. 

ಸೋಂಪುರದ ಸಬ್‌ ರಿಜಿಸ್ಟ್ರಾರ್‌ ಕಚೇರಿ ಬಳಿ ನಿಂತಿದ್ದ ಕಾರಿನ ಗಾಜು ಒಡೆಯುವ ಕಳ್ಳರು, ಹಣ ಕಳ್ಳತನ ಮಾಡುವ ದೃಶ್ಯಗಳು ಪಕ್ಕದ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 ಓರ್ವ ಬೈಕ್ ನಲ್ಲಿ ಕುಳಿತಿದ್ದರೆ ಮತ್ತೋರ್ವ ಯಾರಿಗೂ ಅನುಮಾನ ಬಾರದಂತೆ ನಿಂತುಕೊಂಡು ಕಾರಿನ ಗಾಜನ್ನು ಒಡೆದು ಕಾರಿನೊಳಗಿದ್ದ ಹಣದ ಬ್ಯಾಗ್‌ ಎತ್ತಿಕೊಳ್ಳುತ್ತಾನೆ. ನಂತರ ಅಲ್ಲಿ ಪಕ್ಕದಲ್ಲಿಯೇ ಇದ್ದ ತನ್ನ ಸಹಚರನ ಬೈಕ್‌ ಹತ್ತಿಕೊಂಡು ಅಲ್ಲಿಂದ ಪರಾರಿ ಆಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. 

ಶುಕ್ರವಾರ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News