×
Ad

‘ಶ್ರೀಮತಿ ರಾಜಲಕ್ಷ್ಮೀ ಬರಗೂರು ಪ್ರಶಸ್ತಿ’ಗೆ ಡಾ.ಎಚ್.ಎಲ್.ಪುಷ್ಪಾ, ಡಾ.ಎಸ್.ರತ್ನಮ್ಮ ಆಯ್ಕೆ

Update: 2026-03-07 20:23 IST

ಡಾ.ಎಸ್.ರತ್ನಮ್ಮ / ಡಾ.ಎಚ್.ಎಲ್.ಪುಷ್ಪಾ

ಬೆಂಗಳೂರು: ನಾಡೋಜ ಪ್ರೊ.ಬರಗೂರು ಪ್ರತಿಷ್ಠಾನದಿಂದ ನೀಡುವ ಪ್ರತಿಷ್ಠಿತ ‘ಶ್ರೀಮತಿ ರಾಜಲಕ್ಷ್ಮೀ ಬರಗೂರು ಪ್ರಶಸ್ತಿ’ಗೆ ಲೇಖಕಿ ಡಾ.ಎಚ್.ಎಲ್.ಪುಷ್ಪಾ ಮತ್ತು ಆದಿವಾಸಿ ಸಾಧಕಿ ಡಾ.ಎಸ್ ರತ್ನಮ್ಮ ಅವರಿಗೆ ನೀಡಲಾಗುತ್ತಿದೆ ಎಂದು ಪ್ರತಿಷ್ಟಾನದ ಕಾರ್ಯದರ್ಶಿ ಡಾ.ಎ.ವಿ.ಲಕ್ಷ್ಮೀ ನಾರಾಯಣ ತಿಳಿಸಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಮೇಲ್ಕಂಡ ಪ್ರಶಸ್ತಿಯು ತಲಾ 10ಸಾವಿರ ರೂಪಾಯಿ ಗೌರವಧನ, ಪ್ರಶಸ್ತಿ ಫಲಕ ಮತ್ತು ಫಲಪುಷ್ಪಗಳನ್ನು ಒಳಗೊಂಡಿದೆ. ಮಾ.12ರ ಸಂಜೆ 5 ಗಂಟೆಗೆ ನಗರದ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿವಿ ಕುಲಪತಿ ಡಾ.ಬಿ.ರಮೇಶ್ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಲೋಲಾಕ್ಷಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬರಗೂರು ಪ್ರತಿಷ್ಠಾನವು ಪ್ರತಿವರ್ಷ ಶ್ರೀಮತಿ ರಾಜಲಕ್ಷ್ಮೀ ಬರಗೂರು ಅವರ ಹೆಸರಿನಲ್ಲಿ ಇಬ್ಬರು ಮಹಿಳೆಯರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News