×
Ad

ಬೆಂಗಳೂರು | ಚಲಿಸುತ್ತಿದ್ದ ಎಲೆಕ್ಟ್ರಿಕ್ ಕಾರು ಬೆಂಕಿಗಾಹುತಿ: ವೀಡಿಯೊ ವೈರಲ್

Update: 2023-09-30 23:34 IST

ಬೆಂಗಳೂರು: ಚಲಿಸುತ್ತಿದ್ದ ಎಲೆಕ್ಟ್ರಿಕ್​ ಕಾರಿನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಡೀ ಕಾರು ಸುಟ್ಟು ಕರಕಲಾಗಿರುವ ಘಟನೆ ಶನಿವಾರ ಮಧ್ಯಾಹ್ನ ಜೆ.ಪಿ ನಗರ ಸಮೀಪ ವರದಿಯಾಗಿದೆ. 

ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜೆ.ಪಿ ನಗರದಲ್ಲಿ ಚಾಲಕ ಮತ್ತು ಆತನ ಸ್ನೇಹಿತ ಎಲೆಕ್ಟ್ರಿಕ್ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಂಜಿನ್​ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ತಕ್ಷಣ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ ಚಾಲಕ ಹಾಗೂ ಆತನ ಸ್ನೇಹಿತ ಕಾರಿನಿಂದ ಇಳಿದಿದ್ದಾರೆ.

ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ದೃಶ್ಯವು ಮೊಬೈಲ್‌ ನಲ್ಲಿ ಸೆರೆಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News