×
Ad

ಬೆಂಗಳೂರು | ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ, ಓರ್ವ ಸಾವು

Update: 2023-09-15 18:44 IST

ಬೆಂಗಳೂರು, ಸೆ.15: ಇಲ್ಲಿನ ದೇವನಹಳ್ಳಿ ತಾಲೂಕಿನ ಮಂಡಿಬೆಲೆ ಗ್ರಾಮದಲ್ಲಿ ನಡೆದಾಡುವ ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಘಟನೆಯಲ್ಲಿ ಓರ್ವನ ಕೊಲೆಯಾಗಿ ಮೂವರಿಗೆ ಚಾಕು ಇರಿದಿರುವುದಾಗಿ ವರದಿಯಾಗಿದೆ.

ಮಂಡಿಬೆಲೆ ಗ್ರಾಮದಲ್ಲಿ ಸೆ.14ರ ರಾತ್ರಿ ಗ್ರಾಮದ ಗಜೇಂದ್ರ ಹಾಗೂ ಪಕ್ಕದ ಮನೆಯ ಪಕ್ಕದ ಮನೆಯ ಮೋಹನ್ ವಿಜಿ ಎಂಬುವರ ನಡುವೆ ಗಲಾಟೆ ಸಂಭವಿಸಿದೆ. ಈ ವೇಳೆ ಮೋಹನ್ ವಿಜಿ ತನ್ನ ಸ್ನೇಹಿತರ ಗುಂಪನ್ನು ಕರೆಸಿದ್ದು ಗಲಾಟೆ ಜೋರಾಗಿದೆ. ಮೊದಲು ಮೋಹನ್ ಹಾಗೂ ಮೂವರ ಮೇಲೆ ಗಜೇಂದ್ರ ಚಾಕು ಇರಿದಿದ್ದು, ಚಾಕು ಇರಿಯುತ್ತಿದ್ದಂತೆ ಗಜೇಂದ್ರನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಕೊಲೆಯಾದ ಗಜೇಂದ್ರ ಮೃತದೇಹವನ್ನು ತಾಲೂಕಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಮೋಹನ್, ವಿಜಿ, ಲಿಕಿತ್ ಸೇರಿದಂತೆ ಹಲವರನ್ನು ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News