ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಜೀವಾವಧಿ ಶಿಕ್ಷೆಯ ಆರೋಪಿಯನ್ನು ಬಿಡುಗಡೆ ಮಾಡಿದ್ದ ಪ್ರಕರಣ ಸಂಬಂಧ ಕಾರಾಗೃಹಗಳ ಉತ್ತರ ವಲಯ ಡಿಐಜಿ ಸೋಮಶೇಖರ್ ರನ್ನು ಪರಪ್ಪನ ಆಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

2018ರಲ್ಲಿ ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃದಿಂದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬಾತನ ಬಿಡುಗಡೆ ಮಾಡಲಾಗಿತ್ತು. ಶ್ರೀಕಾಂತ್ ಎಂಬ. ದ್ವಿತೀಯ ದರ್ಜೆ ಸಹಾಯಕ ಸುಪ್ರೀಂ ಕೋರ್ಟ್ ನಿಂದ ಶಂಕರ್ ಜೀವಾವಧಿ ಶಿಕ್ಷೆ ರದ್ದಾಗಿರುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿದ್ದ.

ಈ ವಿಚಾರ ಇತ್ತೀಚಿಗೆ ದಾಖಲೆಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ನಂತರ ಜೈಲು ಅಧಿಕಾರಿಗಳು ಈ ಬಗ್ಗೆ ಪರಪ್ಪನ ಆಗ್ರಹಾರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಶಂಕರ್ ಹಾಗೂ ಶ್ರೀಕಾಂತ್ ಇಬ್ಬರನ್ನು ಬಂಧನ ಮಾಡಿದ್ದರು.

ಇದರ ತನಿಖೆಯ ಮುಂದುವರೆದ ಭಾಗವಾಗಿ 2018 ರಲ್ಲಿ ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಆಗಿದ್ದ ಹಾಗೂ ಹಾಲಿ ಕಾರಾಗೃಹ ಇಲಾಖೆಯ ಉತ್ತರ ವಲಯದ ಡಿಐಜಿ ಆಗಿರುವ ಸೋಮಶೇಖರ್ ಪಾತ್ರವೂ ಈ ಬಿಡುಗಡೆಯಲ್ಲಿ ಇತ್ತು ಎಂಬುದು ಗೊತ್ತಾಗಿದೆ. ಈ ಹಿನ್ನಲೆ ಸೋಮಶೇಖರ್ ಬಂಧನ ಮಾಡಿ ಪರಪ್ಪನ ಆಗ್ರಹಾರ‌ ಠಾಣೆ ಪೊಲೀಸರು ಹೆಚ್ಚಿನ ತನಿಖೆಯನ್ನ ಮಾಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor