ರೇಣುಕಾಸ್ವಾಮಿ ಕೊಲೆ ಪ್ರಕರಣ: 4ನೇ ದಿನವೂ ಮುಂದುವರಿದ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ
ರೇಣುಕಸ್ವಾಮಿ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು (ಅ.5) ಕೂಡ ಮಾಫಿ ಸಾಕ್ಷಿ ಪ್ರದೂಶ್ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆ ಮುಂದುವರಿದಿದೆ.
ಈಗಾಗಲೇ ಮೂರು ದಿನಗಳ ಕಾಲ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಿದ್ದ 59ನೇ ಸಿಸಿಎಚ್ ನ್ಯಾಯಾಲಯ ಸೋಮವಾರ ನಾಲ್ಕನೆ ದಿನ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡುತ್ತಿದೆ.
ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಪ್ರದೂಶ್ ನನ್ನು 59 ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಹುತೇಕ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಮುಕ್ತಾಯವಾಗುವ ಸಾಧ್ಯತೆ ಇದೆ.
ಇತ್ತ ಕಡೆ ಮಾಫಿ ಸಾಕ್ಷಿ ದಾಖಲು ಮುಕ್ತಾಯವಾದರೆ ಮಾಫಿ ಸಾಕ್ಷಿಯ ಕ್ರಾಸ್ ಎಕ್ಸಾಮಿನೇಷನ್ ಗೆ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೂಶ್ ಮೊದಲಿಗೆ 14ನೇ ಆರೋಪಿಯಾಗಿದ್ದನು. ನಂತರ ಆತ ಮಾಫಿ ಸಾಕ್ಷಿಯಾಗುವುದಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. ಇದನ್ನ ಪ್ರಾಸಿಕ್ಯೂಷನ್ ಕೂಡ ಒಪ್ಪಿಕೊಂಡಿತ್ತು. ಹೀಗಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡುವ ಕಾರ್ಯ ನಡೆಯುತ್ತಿದೆ.