×
Ad

ಬೆಂಗಳೂರು: ತಪ್ಪಿಸಿಕೊಂಡ ಚಿರತೆ ಸೆರೆಗೆ 5 ತಂಡ ನಿಯೋಜನೆ

Update: 2023-10-31 11:23 IST

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಎಇಸಿಎಸ್ ಲೇಔಟ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆ  ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಐದು ತಂಡಗಳನ್ನು ನಿಯೋಜಿಸಿದ್ದಾರೆ. 

ಸೋಮವಾರವೂ ಚಿರತೆಯನ್ನು ಸೆರೆ ಹಿಡಿಯಲು ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ಬೋನುಗಳನ್ನು ಇಡಲಾಗಿತ್ತು.

ಅಕ್ಟೋಬರ್ 27 ರಂದು ರಾತ್ರಿ ಚಿರತೆ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ತಿರುಗಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಅಂದಿನಿಂದ ಚಿರತೆ ಕಾಣಿಸಿಕೊಂಡಿಲ್ಲ. 

ಇದೀಗ ​ಅಪಾರ್ಟ್‌ ಮೆಂಟ್‌ ನ ಸುತ್ತಮುತ್ತ ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿದ ಅರಣ್ಯಾಧಿಕಾರಿಗಳು ಖಾಲಿ ಕಟ್ಟಡದ ಒಳ ಭಾಗದಲ್ಲಿ ಚಿರತೆ ಇರೋದು ಖಚಿತಪಡಿಸಿದ್ದಾದ್ದಾರೆ. ಹೀಗಾಗಿ ಅದನ್ನು ಸೆರೆ ಹಿಡಿಯಲು ಮೈಸೂರಿನಿಂದ ತಜ್ಞರ ತಂಡವೊಂದು ಆಗಮಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News