ಉತ್ತಮ ಶಿಕ್ಷಕ, ಉಪನ್ಯಾಸಕರ, ಪ್ರಾಂಶುಪಾಲ ಪ್ರಶಸ್ತಿ ಪ್ರಕಟ
ದಕ್ಷಿಣ ಕನ್ನಡ ಜಿಲ್ಲೆಯ ಅಂಬ್ಲಮೊಗರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ. ಜಗದೀಶ ಶೆಟ್ಟಿ
ಬೆಂಗಳೂರು: ರಾಜ್ಯಮಟ್ಟದ ಉತ್ತಮ ಶಿಕ್ಷಕ, ಉಪನ್ಯಾಸಕರ ಪ್ರಶಸ್ತಿ, ಉತ್ತಮ ಪ್ರಾಂಶುಪಾಲ ಮತ್ತು ಉತ್ತಮ ಶಾಲಾ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು, ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಇಬ್ಬರು ಮತ್ತು ಉಪನ್ಯಾಸಕರ ಪ್ರಶಸ್ತಿಗೆ 8 ಮಂದಿ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಂಬ್ಲಮೊಗರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ. ಜಗದೀಶ ಶೆಟ್ಟಿ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿರುವ ಪಿ.ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರನಾರಾಯಣ ಬಿಲ್ಲವ, ತುಮಕೂರು ಜಿಲ್ಲೆಯ ಎಸ್.ಬಿ.ಶಿವಣ್ಣ, ಎಂ.ಹರೀಶ್ ಕುಮಾರ್, ಎಚ್.ಆರ್.ಗೋವಿಂದರಾಜು ಪ್ರಾಥಮಿಕ ಶಾಲಾ ವಿಭಾಗದಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಮನಗರದ ಟಿ.ರಾಮಚಂದ್ರಪ್ಪ, ಮಹಾಂತೇಶ ಮೇಟಿ, ಎಸ್.ಜಿ ಮಡಿವಾಳಮ್ಮ, ವೈ.ಇ.ಲೋಹಿತೇಶ, ಜಿ. ಮಂಜುನಾಥ, ಎಚ್.ಕೆ. ಕುಮಾರ, ಬಸವರಾಜ ಗಿರಪ್ಪ ಕಲ್ಲೋಳಿ, ಹುಚ್ಚಪ್ಪ ಬಿ. ಕೊರವರ, ಎಚ್. ಮಂಜುನಾಥ, ಕೆ.ಎಲ್. ಪುರುಷೋತ್ತಮ, ಎಸ್.ಎನ್. ಸಂತಾನ ರಾಮನ್, ಪರಮೇಶ್ವರ ರಾಮ ನಾಯ್ಕ, ಎನ್. ಪ್ರೇಮಾವತಿ, ಲಂಬಾಣಿ ರೆಡ್ಡಿ ನಾಯ್ಕ, ಹೊನ್ನ ಹನುಮಯ್ಯ ಪ್ರಾಥಮಿಕ ಶಾಲಾ ವಿಭಾಗದಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದ ಉತ್ತಮ ಶಿಕ್ಷಕ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ವಿಭಾಗದ(ಪ್ರೌಢ ಶಾಲಾ ವಿಭಾಗ) ಶಿಕ್ಷಕ ಸತೀಶ್ ಭಟ್, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಜಾಲಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಶ್ರೀಧರ ಗಣೇಶ ಶೇಟ್ ಆಯ್ಕೆಯಾಗಿದ್ದಾರೆ.
ಹಣಮಂತ್ರಾಯ ಸೋಮಾಪುರ, ಗೋಪಾಲ ಕೆ. ನಾಯ್ಕ, ಯಶವಂತ ಕುಮಾರ ಸಿ.ಜಿ., ರಾಜಶೇಖರ ಕಲ್ಯಾಣಪ್ಪ ರಗಟಿ, ರವೀಂದ್ರ ಮಾರುತಿ ಶಿಂದೆ, ನೀಲಕಂಠ ಸುಗಪ್ಪಾ ಗೋವಿಂದರಡ್ಡಿ, ಆರ್ ಶಿವಶಂಕರ್, ವಿ.ಡಿ. ಶಿವಣ್ಣ, ಶಿವನ ನಾಯಕ ಪ್ರೌಢಶಾಲಾ ವಿಭಾಗದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ಆನಂದ ಶಿವಪ್ಪಾ ಕೋಳಿ ಮತ್ತು ಮೈಸೂರು ಜಿಲ್ಲೆಯ ಕೃಷ್ಣಯ್ಯ ಎಚ್.ಕೆ. ಆಯ್ಕೆಯಾಗಿದ್ದಾರೆ. ಉಪನ್ಯಾಸಕರ ಪ್ರಶಸ್ತಿಗೆ ಕೆ.ಆರ್. ಪುರಂನ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸ ದೇವರಾಜು ಆರ್., ಶಿವಮೊಗ್ಗ ಜಿಲ್ಲೆಯ ಡಾ. ಸಫ್ರರಾಜ ಜಿ., ಡಾ. ಲಿಂಗಾನಂದ ಕೆ ಗವಿಮರ್, ಜ್ಯೋತಿ ಸಿ.ಎಂ., ಬಸವರಾಜ ಎಸ್ ಜಲವಾಡಿ, ಡಾ. ಲೋಕೇಶ್ ಕೆ. ವಿಜಯಲಕ್ಷ್ಮಿ ಪಂಡಪ್ಪ ಪೆಟ್ಟೂರು, ವೆಂಕಟಾಚಲ ಸಿ.ವಿ. ಆಯ್ಕೆಯಾಗಿದ್ದಾರೆ. ಎಲ್ಲ ಪ್ರಶಸ್ತಿಗಳು ತಲಾ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲವನ್ನು ಒಳಗೊಂಡಿವೆ.
ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರವರ ಹೆಸರಿನಲ್ಲಿ ಉತ್ತಮ ಶಾಲಾ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ವೀರರಾಘವನಪಾಳ್ಯದ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸರಕಾರಿ ಪದವಿ ಪೂರ್ವ ಕಾಲೇಜು ಆಯ್ಕೆಯಾಗಿದೆ.
ಪ್ರಶಸ್ತಿಗಳನ್ನು ಸೆ.5ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆ.