ಜಿಎಸ್‌ಟಿ ಕಡಿತ ಮುಂದಿಟ್ಟು ಪ್ರಚಾರ ಪಡೆಯಲು ಹೋಗಿ ವ್ಯಾಪಕ ಟೀಕೆಗೊಳಗಾದ ಬಿಜೆಪಿ!
ರಾಜ್ಯ ಬಿಜೆಪಿ ಫೇಸ್ ಬುಕ್ ಪೋಸ್ಟ್ ಗೆ ಜನರಿಂದ ಆಕ್ರೋಶಭರಿತ ಪ್ರತಿಕ್ರಿಯೆ
Photo: facebook/BJP Karnataka
ಬೆಂಗಳೂರು: ಕೇಂದ್ರ ಸರಕಾರ ಜಿಎಸ್ ಟಿ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ ಪೋಸ್ಟ್ ವೊಂದು ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗಿದೆ.
'ಜನವಿರೋಧಿ ಯುಪಿಎ ಸರಕಾರಕ್ಕೂ, ಜನಪರ ಮೋದಿ ಸರಕಾರಕ್ಕೂ ಇರುವ ವ್ಯತ್ಯಾಸ ಇಷ್ಟೇ ನೋಡಿ!!' ಎಂದು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿದ್ದ ತೆರಿಗೆ ಮತ್ತು ಹಾಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ಅವಧಿಯಲ್ಲಿನ ತೆರಿಗೆಯ ವ್ಯತ್ಯಾಸದ ಬಗ್ಗೆ ಮಂಗಳವಾರ ಬೆಳಗ್ಗೆ ಪೋಸ್ಟ್ ವೊಂದನ್ನು ಬಿಜೆಪಿ ಹಾಕಿದೆ.
ಈ ಪೋಸ್ಟ್ ಗೆ 400ಕ್ಕೂ ಅಧಿಕ ಕಮೆಂಟ್ ಗಳು ಬಂದಿದ್ದು, ಆ ಪೈಕಿ ಬಹಳಷ್ಟು ಮಂದಿ ಬಿಜೆಪಿಗೆ ಛೀಮಾರಿ ಹಾಕಿದ್ದಾರೆ. ''ನೀವೇ ಜಾಸ್ತಿ ಮಾಡಿ 8 ವರ್ಷ ಚನ್ನಾಗಿ ನುಂಗಿ ಈವಾಗ ಕಡಿಮೆ ಮಾಡಿದ್ರೆ ನೀವು ಮಾಡಿದ್ದೂ ಮರೆತು ಹೋಗೋ ಅಷ್ಟ್ ಮುಟ್ಟಾಳ್ರು ಅಲ್ಲ ನಮ್ಮಭಾರತ ದೇಶದ ಜನ' ಎಂದು ಗೋವಿಂದರಾಜು ಬಿ.ಕೆ. ಎಂಬವರು ಕಮೆಂಟ್ ಮಾಡಿದ್ದಾರೆ.
"Sir GST ತಂದಿದು ಯಾರು? ಏರಿಸಿದ್ದು ಯಾರು? ಇಳಿಸಿದ್ದು ಯಾರು?ದಯವಿಟ್ಟು ತಿಳಿಸಿ ಯಾಕೆಂದ್ರೆ ನಾನೊಬ್ಬ ಅರ್ಥಶಾಸ್ತ್ರದ ಉಪನ್ಯಾಸಕ ಆದ್ದರಿಂದ" ಎಂದು ಸಿದ್ದೇಶ ಪಿ. ಸಿದ್ದು ಎಂಬವರು ಪ್ರತಿಕ್ರಿಯಿಸಿದ್ದಾರೆ.
''ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ ಜನರನ್ನು ಎಷ್ಟು ಮಂಕ ಮಾಡುತ್ತಿದ್ದರ ನೀವು ನೋಡಿ Gst ಏರಿಸಿದ್ದು ಇವರೇ ಕಡಿಮೆ ಮಾಡಿದ್ದು ಇವರೇ ಏನೋ ದೊಡ್ಡ ಸಾಧನೆ ಮಾಡಿಬಿಟ್ಟಿದ್ದಾರೆ ಎಂಬ ಹೆಗ್ಗಳಿಕೆ ತಮ್ಮ ಬೆನ್ನನ್ನು ತಾವೇ ಚಪ್ಪರಸಿಕೊಳ್ಳುತ್ತಿದ್ದಾರೆ'' ಎಂದು Rap Manju ಎಂಬವರು ವ್ಯಂಗ್ಯವಾಡಿದ್ದಾರೆ.
''ನಾವೇನು ಮುಟ್ಟಲ್ರಲ್ಲ ನಾವು ವಿದ್ಯಾವಂತರೇ ನಿಮ್ಮ ಮೋದಿನೇ ಜಿಎಸ್ಟಿ ಏರಿಸಿದ್ದು ನಿಮ್ಮ ಮೋದಿನೇ ಜಿಎಸ್ಟಿ ಇಳಿಸಿದ್ದು 8 ವರ್ಷ ನುಂಗಿ ನೀರು ಕುಡಿದ್ರಲ್ಲ ಅದರ ಲೆಕ್ಕ ಕೊಡಿ'' ಜಗದೀಶ್ ಎಂಬವರು ಒತ್ತಾಯಿಸಿದ್ದಾರೆ.
" Wow ಮೋದಿಜೀ wow, ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಇಷ್ಟೋಂದು ತೆರಿಗೆ ಇಳಿಸಿ ಜನಸಾಮಾನ್ಯರು ಉಸಿರಾಡುವ ಹಾಗೆ ಮಾಡಿದ್ದೀರಿ" ಅಂದಹಾಗೆ ಇವರ ಪ್ರಕಾರ ಮೋದಿ 2014 ರಲ್ಲಿ ಅಲ್ಲ ಅಧಿಕಾರಕ್ಕೆ ಬಂದಿದ್ದು 2025ರಲ್ಲಿ" ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ಫೇಸ್ ಬುಕ್ ಪೋಸ್ಟ್ ಗೆ ಬುಧವಾರ ಮದ್ಯಾಹ್ನ 2 ಗಂಟೆವರೆಗೆ 2 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 400 ಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ.
ದೇಶದಲ್ಲಿ ಜಿಎಸ್‌ಟಿ 2.0 ಸೋಮವಾರದಿಂದ ಜಾರಿಗೆ ಬಂದಿದೆ.
ಹೊಸ ಜಿಎಸ್ಟಿ ದರ ಹಾಗೂ ಈ ವರ್ಷದ ಆರಂಭದಲ್ಲಿ ಘೋಷಿಸಿದ ಆದಾಯ ತೆರಿಗೆ ದರ ಬದಲಾವಣೆಯಿಂದ ಭಾರತೀಯರಿಗೆ 2.5 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.