×
Ad

ಕಾವೇರಿ ನೀರು ವಿಚಾರ: ಸಿದ್ದರಾಮಯ್ಯರನ್ನು ನಿಂದಿಸಿದ ಚಕ್ರವರ್ತಿ ಸೂಲಿಬೆಲೆಗೆ ನೆಟ್ಟಿಗರಿಂದ ಛೀಮಾರಿ

Update: 2023-09-28 18:12 IST

ಮೈಸೂರು, ಸೆ.28: ಕಾವೇರಿ ನೀರು ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೀಯಾಳಿಸಿ 'X' (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿರುವ ಚಕ್ರವರ್ತಿ ಸೂಲಿಬೆಲೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

‘ಸಿದ್ದರಾಮಯ್ಯ ಯಾಕೆ ತಮಿಳುನಾಡಿಗೆ ನೀರು ಬಿಟ್ಟರು ಎಂದು 'ಸಿದ್ರಾಮ' ಹೆಸರನ್ನು ತಿರುಗಿಸಿ ಓದಿದರೆ ಗೊತ್ತಾಗುತ್ತದೆ. ಸಿದ್ರಾಮ ಎಂಬುದನ್ನು ಹಿಂಬದಿಯಿಂದ ಓದಿದರೆ 'ಮದ್ರಾಸಿ' ಎಂಬಂತಾಗುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನೆಟ್ಟಿಗರು ಸೂಲಿಬೆಲೆಯನ್ನು ತೀವ್ರವಾಗಿ ತರಾಟೆಗೈದಿದ್ದಾರೆ.

ʼʼನೀವೇ ಲ್ಯಾಪ್ ಟಾಪ್ ಕನೆಕ್ಟ್ ಮಾಡಿ ಕರ್ನಾಟಕ ನೀರನ್ನು ಉಳಿಸಿ ಎಂದು ಮೋದಿಗೆ ಹೇಳಿ. ಈ ತರ ಚೀಪ್ ಪೋಸ್ಟ್ ಮಾಡಬೇಡಿ, ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿ. ರೈತರ ಸಂಕಷ್ಟದ ಸಮಯದಲ್ಲಿ ಅವರಿಗೆ ದನಿಯಾಗುವುದನ್ನು ಬಿಟ್ಟು ಹೀಗೆ ವ್ಯಂಗ್ಯ ಮಾಡುತ್ತಿದ್ದೀಯಲ್ಲ, ನೀನು ಒಬ್ಬ ಮನುಷ್ಯನಾʼʼ ಎಂದು ನಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ʼʼಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿಯಿರುವ ವಿಶ್ವಗುರುವಿಗೆ ಕಾವೇರಿ ಸಮಸ್ಯೆಯೇಕೆ ಕಾಣುತ್ತಿಲ್ಲಾ? ನಿಮ್ಮ ಪಕ್ಷದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಪ್ರಲ್ಹಾದ್ ಜೋಶಿ, BL ಸಂತೋಶ್ ರವರುಗಳು ಏಕೆ ಕಾವೇರಿ ವಿಚಾರವಾಗಿ ಮೌನ ತಾಳಿದ್ದಾರೆ?ʼʼ ಎಂದು ಅರುಣ್ ಜಾವಗಲ್ ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ, ಕರ್ನಾಟಕದ ಬಿಜೆಪಿ ಸಂಸದರ ಭಾವಚಿತ್ರವುಳ್ಳ ಪೋಸ್ಟರ್‌ ಹಂಚಿಕೊಂಡಿರುವ ನಟ್ಟಿಗರೊಬ್ಬರು ʼʼದಂಡಪಿಂಡಗಳು ʼʼ ಎಂದು ಬರೆದುಕೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News