×
Ad

ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ ಟೀಕೆ

"ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ʼಬಿಜೆಪಿಯ ಭ್ರಷ್ಟಾಚಾರದ ಬ್ರ್ಯಾಂಡ್ʼ ಅನ್ನು ಗಟ್ಟಿಗೊಳಿಸಿದ್ದಾರೆ"

Update: 2026-02-21 23:58 IST

ಪ್ರಿಯಾಂಕ್‌ ಖರ್ಗೆ (Photo: PTI)

ಬೆಂಗಳೂರು: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಲಂಚದ ಆರೋಪದ ಮೇಲೆ ಲೋಕಾಯುಕ್ತರ ಬಲೆಗೆ ಬಿದ್ದ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, "ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ" ಟೀಕಿಸಿದ್ದಾರೆ.

ಈ ಕುರಿತು ಎಕ್ಸ್‌ ಪೋಸ್ಟ್‌ ಮಾಡಿರುವ ಅವರು, "ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ. ಗುತ್ತಿಗೆದಾರರಿಂದ ಕಮಿಷನ್ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ʼಬಿಜೆಪಿಯ ಭ್ರಷ್ಟಾಚಾರದ ಬ್ರ್ಯಾಂಡ್ʼ ಅನ್ನು ಗಟ್ಟಿಗೊಳಿಸಿದ್ದಾರೆ." ಎಂದು ಟೀಕಿಸಿದ್ದಾರೆ.

"ಭ್ರಷ್ಟಾಚಾರದಲ್ಲಿ ಪಳಗಿದ ಬಿಜೆಪಿಯ ಹಿರಿತಲೆಗಳು ಹಿಂದಿನ “40% ಕಮಿಷನ್“ ಕಲೆಯನ್ನು ತಮ್ಮ ಯುವ ಶಾಸಕರಿಗೆ ಚೆನ್ನಾಗಿಯೇ ಕಲಿಸಿದ್ದಾರೆ!. ಇದು ಯಾರೋ ಮಾಡಿದ ಬಾಯಿ ಮಾತಿನ ಆರೋಪವಲ್ಲ, ಲೋಕಾಯುಕ್ತರು ಪ್ರತ್ಯಕ್ಷವಾಗಿ ಹಿಡಿದಿದ್ದು. ತಮ್ಮ ಶಾಸಕರ ಈ ಕೃತ್ಯಕ್ಕೆ ರಾಜ್ಯಾಧ್ಯಕ್ಷರು ಹೊಣೆ ಹೊರುತ್ತಾರಾ? ವಿರೋಧ ಪಕ್ಷದ ನಾಯಕರು ರಾಜೀನಾಮೆ ಕೊಡುತ್ತಾರಾ? ಅಥವಾ ಚಂದ್ರು ಲಮಾಣಿ ಅವರಿಂದ ರಾಜೀನಾಮೆ ಕೊಡಿಸುತ್ತಾರಾ? ಬಿಜೆಪಿ, ಆರ್‌ ಅಶೋಕ್‌, ಬಿವೈ ವಿಜಯೇಂದ್ರ ಅವರು ಉತ್ತರಿಸಬೇಕು" ಎಂದು ಪ್ರಿಯಾಂಕ್‌ ಖರ್ಗೆ ಪೋಸ್ಟ್‌ ಮಾಡಿದ್ದಾರೆ.

“ನಾ ಖಾವುಂಗಾ ನಾ ಖಾನೆದುಂಗಾ“ ಎಂಬ ಸ್ಲೋಗನ್ ಗೆ ಯಾವ ಅರ್ಥ ನೀಡಲಾಗಿದೆ ಎಂಬುದನ್ನೂ ಬಿಜೆಪಿ ಹೇಳಬೇಕು? ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News