×
Ad

ಡಿ.ಬಿ ಚಂದ್ರೇಗೌಡ ಅವರ ಅಂತಿಮ ದರ್ಶನ ಪಡೆದ ಸ್ಪೀಕರ್ ಯು.ಟಿ. ಖಾದರ್

Update: 2023-11-08 22:16 IST

ಮೂಡಿಗೆರೆ: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಅವರು ನಿಧನರಾಗಿದ್ದು,ಬುಧವಾರ ಸ್ಪೀಕರ್ ಯು ಟಿ ಖಾದರ್ ರವರು ಡಿ.ಬಿ.ಚಂದ್ರೇಗೌಡ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.

''ಶಾಸಕರಾಗಿ,ಸಂಸದರಾಗಿ,ಸಚಿವರಾಗಿ ಹಾಗೂ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅಪರೂಪದ ಸಾಧನೆ ಮಾಡಿದ್ದ ಡಿ ಬಿ ಚಂದ್ರೇಗೌಡ ಅವರಿಗೆ ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಮತ್ತು ಸಮಾಜ ಸೇವೆಯ ಬಗೆಗಿನ ಕಾಳಜಿ ಗಮನಾರ್ಹವಾದುವು. ಅವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಬಹಳ ದುಃಖವಾಯಿತು,ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ'' ಎಂದು ಯು.ಟಿ ಖಾದರ್ ಈ ಸಂದರ್ಭದಲ್ಲಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News