ಪ್ರತಿಪಕ್ಷ ಉಪನಾಯಕನಿಗೆ ಏನೂ ಪವರ್ ಇರಲ್ಲ: ಶಾಸಕ ಯತ್ನಾಳ್
Update: 2023-12-06 11:16 IST
Photo: PTI
ಬೆಳಗಾವಿ: ಶಾಸಕ ಅರವಿಂದ್ ಬೆಲ್ಲದ್ ಅವರನ್ನು ಪ್ರತಿಪಕ್ಷ ಉಪನಾಯಕನನ್ನಾಗಿ ಮಾಡುವ ವಿಚಾರವಾಗಿ ಶಾಸಕ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಉಪನಾಯಕನಿಗೆ ಏನೂ ಪವರ್ ಇರಲ್ಲ. ಏನೋ ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಎಲ್ಲ ತೀರ್ಮಾನಗಳು ಪ್ರತಿಪಕ್ಷ ನಾಯಕ ,ಬಿಜೆಪಿ ರಾಜ್ಯಾಧ್ಯಕ್ಷರು ತೆಗದುಕೊಳ್ತಾರೆ. ಉಪನಾಯಕ ಅಂದ್ರೆ ಪ್ರತಿಪಕ್ಷ ನಾಯಕನ ಪಕ್ಕದಲ್ಲಿ ಕೂರಬೇಕು ಅಷ್ಟೇ. ಈಗ ಡೆಪ್ಯೂಟಿ ಸ್ಪೀಕರ್ ಇಲ್ವಾ? ಅದೇ ರೀತಿ ಸುಮ್ನೆ ಕೂರಬೇಕು ಅಷ್ಟೇ. ಸ್ಪೀಕರ್ ಯಾವತ್ತೂ ಡೆಪ್ಯೂಟಿ ಸ್ಪೀಕರ್ ಗೆ ಮೇಲೆ ಕೂರಲು ಅವಕಾಶನೇ ಕೊಡಲ್ಲ. ನಿನ್ನೆ ಏನು ಅರ್ಧ ಗಂಟೆ ಡೆಪ್ಯೂಟಿ ಸ್ಪೀಕರ್ ಗೆ ಮೇಲೆ ಕೂರಲು ಅವಕಾಶ ಕೊಟ್ರು ಅಷ್ಟೇ. ಉಪನಾಯಕನಿಗೆ ಸಮಾಜದಲ್ಲೂ ಗೌರವ ಸಿಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.