×
Ad

ಧರ್ಮಸ್ಥಳ ಪ್ರಕರಣ | ತನಿಖೆ ತಾರ್ಕಿಕ ಅಂತ್ಯ ಕಾಣುವವರೆಗೂ ಎಸ್‍ಐಟಿ ಮುಂದುವರೆಸಲು ಸಿಎಂಗೆ ಮನವಿ

Update: 2025-10-21 19:10 IST

ಬೆಂಗಳೂರು, ಅ.21: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಎಸ್‍ಐಟಿ ವ್ಯಾಪ್ತಿಗೆ ತಂದು, ಇದರ ಸಮಗ್ರ ತನಿಖೆ ತಾರ್ಕಿಕ ಅಂತ್ಯ ಕಾಣುವವರೆಗೂ ಎಸ್‍ಐಟಿ ಮುಂದುವರೆಸುವಂತೆ ಕೋರಿ ‘ಕೊಂದವರು ಯಾರು ಆಂದೋಲನ’ದ ನಿಯೋಗವು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದೆ.

ಮಂಗಳವಾರ ಸಿಎಂ ನಿವಾಸ ಕಾವೇರಿಯಲ್ಲಿ ‘ಕೊಂದವರು ಯಾರು’ ಆಂದೋಲನದ ನಿಯೋಗವು, ಸಿಎಂ ಭೇಟಿ ಮಾಡಿ, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳನ್ನು ಎಸ್‍ಐಟಿ ವ್ಯಾಪ್ತಿಗೆ ತರಬೇಕು. ಎಸ್‍ಐಟಿ ತನಿಖೆ ಸಮಗ್ರವಾಗಿ ನಡೆದು ತಾರ್ಕಿಕ ಅಂತ್ಯ ಮುಟ್ಟುವ ತನಕ ಮುಚ್ಚಬಾರದು. ಜೊತೆಗೆ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮವನ್ನೂ ಜರುಗಸಬೇಕು ಎಂದು ಒತ್ತಾಯಿಸಲಾಯಿತು.

ನಿಯೋಗದಲ್ಲಿ ಚಂಪಾವತಿ, ಮಧುಭೂಷಣ್, ಶಕುನ್, ಮಾಯಾರಾವ್, ಗೌರಮ್ಮ, ಜ್ಯೋತಿ ಅನಂತಸುಬ್ಬರಾವ್, ಮಮತಾ ಯಜಮಾನ್, ಮಲ್ಲಿಗೆ ಸಿರಿಮನೆ, ಗೀತಾ, ಸುಜಾತಾ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News