×
Ad

‘ಶಕ್ತಿ’ ಯೋಜನೆ ಯಶಸ್ವಿ; ಶ್ರಮಿಸಿದ ಕೆಎಸ್ಸಾರ್ಟಿಸಿ ಕಾರ್ಮಿಕರಿಗೆ ನಿರ್ದೇಶಕರಿಂದ ಅಭಿನಂದನೆ

Update: 2023-07-04 22:32 IST

ಬೆಂಗಳೂರು, ಜು.4: ರಾಜ್ಯ ಸರಕಾರವು ಜಾರಿ ಮಾಡಿರುವ ‘ಶಕ್ತಿ ಯೋಜನೆ’ಯು ಅಭೂತಪೂರ್ವ ಯಶಸ್ವಿಯಾಗಿದ್ದು, ಇದಕ್ಕೆ ಶ್ರಮಿಸಿದ ನಿಗಮದ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ನಿಗಮದಲ್ಲಿ ಹೊಸ ಬಸ್ಸುಗಳು ಸೇರ್ಪಡೆಯಾಗಿಲ್ಲ. ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಯ ಕೊರತೆ ಇದ್ದರೂ, ಯಾವುದೇ ಬಸ್ಸುಗಳು ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆದಲ್ಲಿ ನಿಲುಗಡೆಯಾಗಿಲ್ಲ. ಸಿಬ್ಬಂದಿಗಳು ಗೈರು ಹಾಜರಾಗದೆ ಯಶಸ್ಸಿಗೆ ದುಡಿದಿದ್ದೀರಿ. ಇದು ಸಂಸ್ಥಗೆ, ಸರಕಾರಕ್ಕೆ ಕೀರ್ತಿ ತಂದಿದೆ ಎಂದು ಅವರು ತಿಳಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News