ಸಚಿವ ಸಂಪುಟ ವಿಸ್ತರಣೆ ವಿಚಾರ: ನಾಯಕರು ಕರೆದಾಗ ದಿಲ್ಲಿಗೆ ಹೋಗುವೆ : ಡಿ.ಕೆ.ಶಿವಕುಮಾರ್
Update: 2026-07-10 19:02 IST
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ಹಿರಿಯ ನಾಯಕರು ದಿಲ್ಲಿಗೆ ಕರೆದಾಗ ಹೋಗುವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ. ಆದರೆ, ಪಕ್ಷದ ನಾಯಕರು ಇವತ್ತು, ಇಲ್ಲವೇ ನಾಳೆ ಬರುತ್ತಾರೆ. ಬಂದ ಮೇಲೆ ಯಾವತ್ತು ಕರೆಯುತ್ತಾರೆಯೋ, ಆಗ ನಾನು ಹೋಗುತ್ತೇನೆ ಎಂದು ಮಾಹಿತಿ ನೀಡಿದರು.
ಬೆಳಗಾವಿಯಲ್ಲಿ ಆರೆಸ್ಸೆಸ್ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಇನ್ನೂ ಅದರ ಬಗ್ಗೆ ಮಾಹಿತಿ ಬಂದಿಲ್ಲ. ದಿನಪತ್ರಿಕೆಯಲ್ಲಿ ಮಾತ್ರ ನೋಡಿ ವರದಿ ಕೇಳಿದ್ದೇನೆ, ಕಾನೂನಿನಲ್ಲಿ ಏನು ಅವಕಾಶ ಇದ್ದರೆ ಸಿಗುತ್ತದೆ. ಕಾನೂನಿನಲ್ಲಿ ಅವಕಾಶ ಇಲ್ಲವೆಂದರೆ ಸಿಗುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಮಾಡುವುದಲ್ಲ ಎಂದರು.