×
Ad

ನಾಯಿ ಕಚ್ಚಿದ್ದ ಪ್ರಕರಣ: ನಟ ದರ್ಶನ್ ಗೆ ನೋಟಿಸ್ ಜಾರಿ

Update: 2023-11-11 23:45 IST

ಬೆಂಗಳೂರು: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಅವರಿಗೆ ಆರ್'ಆರ್ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್'ನಲ್ಲಿ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ನಾಯಿಯ ಕೇರ್ ಟೇಕರ್ ಹೇಮಂತ್ ಅವರನ್ನು ವಿಚಾರಣೆ ಮಾಡಿರುವ ಪೊಲೀಸರು, ಇದೀಗ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಘಟನೆ ವಿವರ: ಕಳೆದ ಅಕ್ಟೋಬರ್ 28 ರಂದು ಆರ್.ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಮಹಿಳೆ ಆಗಮಿಸಿದ್ದರು. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ತಮ್ಮ ಕಾರನ್ನು ಮಹಿಳೆ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್‍ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಮಹಿಳೆ ಕೇಳಿದ್ದಾರೆ. ಆಗ ವಾಗ್ವಾದ ನಡೆಸಿರುವ ದರ್ಶನ್ ಮನೆಯ ಸಿಬ್ಬಂದಿ, ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದಿದ್ದಾರೆ. ಮಹಿಳೆ ಹಾಗೂ ದರ್ಶನ್‍ರ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಬಳಿಕ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ ಎಂದು ದೂರುದಾರ ಅಮಿತಾ ಜಿಂದಾಲ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News