×
Ad

BJPಯವರಿಗೆ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ?: ದಿನೇಶ್ ಗುಂಡೂರಾವ್

Update: 2023-07-13 11:52 IST

ಬೆಂಗಳೂರು: ಯುವ ಬ್ರಿಗೇಡ್ ಕಾರ್ಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವನ್ನು CBIಗೆ ವಹಿಸುವಂತೆ BJPಯವರು ಒತ್ತಾಯಿಸುತ್ತಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಹಾಗೂ ತಿ.ನರಸೀಪುರದ ವೇಣುಗೋಪಾಲ್ ಹತ್ಯೆ ಸಂಬಂಧ ಈಗಾಗಲೇ ನಮ್ಮ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣವಾದ ಅಂಶವನ್ನು ಭೇದಿಸಿದ್ದಾರೆ. ಹೀಗಿರುವಾಗ CBIಗೆ ವಹಿಸುವಂತೆ BJPಯವರ ಒತ್ತಾಯವೇಕೆ? BJPಯವರಿಗೆ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News