×
Ad

ಚಿನ್ನಸ್ವಾಮಿ ಸ್ಟೇಡಿಯಂ | ಐಪಿಎಲ್ ಪಂದ್ಯಕ್ಕೂ ಮೊದಲು ಅಲ್ಪಾವಧಿ ಷರತ್ತು ಪೂರೈಸಬೇಕು : ಡಾ.ಜಿ.ಪರಮೇಶ್ವರ್

Update: 2026-01-18 18:28 IST

ಬೆಂಗಳೂರು : ಮಾರ್ಚ್‍ನಲ್ಲಿ ಐಪಿಎಲ್ ಬರುತ್ತದೆ, ಅಷ್ಟರಲ್ಲಿ ಅಲ್ಪಾವಧಿ ಷರತ್ತು ಪೂರೈಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಷರತ್ತು ಬದ್ಧ ಅನುಮತಿ ಕೊಟ್ಟಿದ್ದೇವೆ. ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ವಿಚಾರಣಾ ಸಮಿತಿ ರಚಿಸಿ ಕ್ರೀಡಾಂಗಣ ಪರಿಶೀಲನೆಗೆ ಹೇಳಿದ್ದೆವು. ಅವರು ಹಲವು ಶಿಫಾರಸುಗಳನ್ನು ನೀಡಿದ್ದರು. ಇದರ ಅನ್ವಯ ಸಂಪುಟದಲ್ಲಿ ಚರ್ಚಿಸಿ, ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದೆವು. ನಾವು ಡಿ. ಕುನ್ಹಾ ಅವರ ಶಿಫಾರಸುಗಳನ್ನು ಕೆಎಸ್‍ಸಿಎಗೆ ಕಳುಹಿಸಿ ಇದನ್ನು ಸರಿಪಡಿಸಿಕೊಳ್ಳಲು ತಿಳಿಸಿದ್ದೇವೆ ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಸ್ಥಿತಿಗತಿ ಅಧ್ಯಯನಕ್ಕೆ ಮಹೇಶ್ವರ್ ರಾವ್ ಸಮಿತಿ ಮಾಡಿದ್ದೆವು. ಅವರು ವರದಿ ಕೊಟ್ಟಿದ್ದರು. ಕೆಎಸ್‍ಸಿಎ ಹೊಸ ಸಮಿತಿಯು ನಾವು ಷರತ್ತು ಪೂರೈಸುವುದಾಗಿ ಭರವಸೆ ನೀಡಿದ್ದರು. ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡಿ ದೀರ್ಘಾವಧಿ ಹಾಗೂ ಅಲ್ಪಾವಧಿಯಲ್ಲಿ ಷರತ್ತು ಪೂರೈಸುವುದಾಗಿ ಬರವಣಿಗೆಯಲ್ಲಿ ಕೊಟ್ಟಿದ್ದಾರೆ. ಅದನ್ನು ಮರುಪರಿಶೀಲನೆ ಮಾಡುತ್ತೇವೆ. ನಾವು ಅವರ ಮೇಲೆ ವಿಶ್ವಾಸ ಇಟ್ಟಿದ್ದೇವೆ. ಕ್ರೀಡಾಂಗಣದ ಬಳಿ ಈಗಾಗಲೇ ಕೆಲಸ ಶುರುವಾಗಿದೆ ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News