×
Ad

ಗೃಹಜ್ಯೋತಿ: ಹಿಂಬಾಕಿ ಇದ್ದರೂ ದೊರಕಲಿದೆ ಯೋಜನೆಯ ಪ್ರಯೋಜನ

Update: 2023-07-02 22:25 IST

ಬೆಂಗಳೂರು, ಜು.2: ಗ್ರಾಹಕರು ವಿದ್ಯುತ್ ಬಿಲ್‍ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆ.30ರೊಳಗೆ ಪಾವತಿಸಬೇಕಿದೆ(ಮೂರು ತಿಂಗಳು ಕಾಲಾವಕಾಶ ಇದೆ) ಎಂದು ಇಂಧನ ಇಲಾಖೆ ಸ್ಪಷ್ಟಣೆ ನೀಡಿದೆ.

ಜು.25ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್‍ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜು.25ರಿಂದ ಆ.25ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟಂಬರ್ ತಿಂಗಳ ಬಿಲ್‍ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25ನೆ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ).

ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು. ಗೃಹಜ್ಯೋತಿ ಯೋಜನೆಗೆ ಗ್ರಾಹಕರು ಜು.25ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್‍ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ, ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ. ಯೋಜನೆಯ ನೋಂದಣಿಗೆ ವಿಳಂಬ ಬೇಡ. ಪ್ರಯೋಜನ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ ಎಂದು ಇಂಧನ ಇಲಾಖೆ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News