×
Ad

ಬೇಸಿಗೆ ಬಿಸಿಲು | ಮತದಾನದ ಅವಧಿ ಹೆಚ್ಚಳಕ್ಕೆ ಬಿಜೆಪಿ ಮನವಿ

Update: 2024-05-03 19:47 IST

ಬೆಂಗಳೂರು: ಎರಡನೇ ಹಂತದಲ್ಲಿ ಮೇ 7ರಂದು ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯ ಅವಧಿಯಲ್ಲಿ ಇನ್ನೂ ಎರಡು ಗಂಟೆ ವಿಸ್ತರಣೆ ಮಾಡಬೇಕು ಎಂದು ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಬಿಸಿಲಿನ ಝಳ ಹೆಚ್ಚಿದ್ದು, ರಾಜ್ಯದ ಇತರೆ ಭಾಗಗಳಿಗಿಂತ ಬೇಸಿಗೆ ಬಿಸಿಲಿನ ಪ್ರಯಾಣವೂ ಆ ಭಾಗದಲ್ಲಿ ಹೆಚ್ಚಿದೆ. ಹೀಗಾಗಿ ಮತದಾನದ ಅವಧಿಯನ್ನು ಬೆಳಗ್ಗೆ 6ರಿಂದ 7ಗಂಟೆಯ ವರೆಗೆ ಹೆಚ್ಚಿಸಬೇಕು ಎಂದು ಬಿಜೆಪಿ ಕೋರಿದೆ.

ಶುಕ್ರವಾರ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ನೇತೃತ್ವದ ನಿಯೋಗದಲ್ಲಿ ಪಕ್ಷದ ಮುಖಂಡರಾದ ರಾಜಶೇಖರ್, ಯಶವಂತ್ ಸೇರಿದಂತೆ ಮತ್ತಿತರರು ಇದ್ದರು. ಈ ಸಂಬಂಧ ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಆಯೋಗ ಭರವಸೆ ನೀಡಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News