×
Ad

ಪರೀಕ್ಷೆಯಲ್ಲಿ ಅನುತ್ತೀರ್ಣ: ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

Update: 2023-07-06 19:12 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.6: ಕಾಲೇಜು ವಿದ್ಯಾರ್ಥಿಯೋರ್ವ ಮನೆಯ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಚಾಲ್ರ್ಸ್(18) ಮೃತ ವಿದ್ಯಾರ್ಥಿಯಾಗಿದ್ದು, ಚಾಲ್ರ್ಸ್ ಆರು ತಿಂಗಳ ಹಿಂದೆ ನಡೆದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ನಂತರ ಮರು ಪರೀಕ್ಷೆ ಕಟ್ಟಿ ಎಕ್ಸಾಂ ಬರೆದಿದ್ದ ಚಾಲ್ರ್ಸ್, ಅದರಲ್ಲೂ ಅನುತ್ತೀರ್ಣನಾದ. ಈ ವೇಳೆ ಕಾಲೇಜಿನವರು ಮೃತ ಬಾಲಕನ ಪೋಷಕರಿಗೆ ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದರು ಎನ್ನಲಾಗಿದೆ.

ಮೊದಲ ಬಾರಿ ಫೇಲಾಗಿದ್ದಾಗಿನಿಂದಲೂ ಮನನೊಂದಿದ್ದ ಚಾಲ್ರ್ಸ್, ಪುನಃ ಅನುತ್ತೀರ್ಣವಾದ ಹಿನ್ನೆಲೆ, ಖಿನ್ನತೆಗೊಳಗಾಗಿ, ಸಾಯಲು ನಿರ್ಧಾರ ಮಾಡಿದ್ದು, ಅದರಂತೆ ಜು.5ರ ಮಧ್ಯರಾತ್ರಿ ಮನೆಯಲ್ಲಿ ಫ್ಯಾನ್‍ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಚಾಲ್ರ್ಸ್ ಮೃತದೇಹವನ್ನು ಸಿ.ವಿ.ರಾಮನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ನಗರದ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News