×
Ad

ʼಟೆಡ್ಡಿಬೇರ್ʼ ಧರಿಸಿ ಬಳ್ಳಾರಿ ಜೈಲಿನ ಬಳಿ ಬಂದ ದರ್ಶನ್ ಅಭಿಮಾನಿ

Update: 2024-10-13 22:42 IST

ಬೆಂಗಳೂರು/ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ನೋಡಲು ಅಭಿಮಾನಿಯೊಬ್ಬ ಟೆಡ್ಡಿ ಬೇರ್ ವೇಷ ಧರಿಸಿ ಜೈಲಿನ ಬಳಿ ರವಿವಾರ ಭೇಟಿ ನೀಡಿದ್ದಾನೆ.

ಆತನನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ದರ್ಶನ್ ಅಭಿಮಾನಿ ಕಾರ್ತಿಕ್ ಎಂದು ಹೇಳಲಾಗಿದೆ. ರವಿವಾರ ಬೆಳಗ್ಗೆ ಜೈಲಿನ ಬಳಿ ಟೆಡ್ಡಿಬೇರ್ ಉಡುಪು’ ಧರಿಸಿ, ‘We are waiting you D'BOSS’ ಎಂಬ ಸಂದೇಶದ ಫಲಕ ಹಿಡಿದು ನಿಂತಿದ್ದ.

ಈ ವೇಳೆ ದರ್ಶನ್ ಅವರನ್ನು ಮಾತನಾಡಿಸಬೇಕೆಂದು ಅಧಿಕಾರಿಗಳಿಗೆ ಕಾರ್ತಿಕ್ ಕೇಳಿಕೊಂಡಿದ್ದಾನೆ. ಅದಕ್ಕೆ ಭೇಟಿಗೆ ಹೊರಗಿನವರಿಗೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News