ಹರಿಹರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ
Update: 2023-11-08 12:19 IST
ಹರಿಹರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆಯಾಗಿರುವ ಘಟನೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ತೇಜಸ್ವಿನಿ (30) ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಪತಿ ಗುಡದಯ್ಯ ಸೇರಿದಂತೆ ಆತನ ಸಂಬಂಧಿಕರು ನಾಪತ್ತೆಯಾಗಿದ್ದು, ಮಹಿಳೆಯನ್ನು ಕೊಲೆ ಮಾಡಿ ನೇಣು ಹಾಕಿರುವ ಬಗ್ಗೆ ಮಹಿಳೆ ಸಂಬಂಧಿಕರು ಶಂಕೆ ವ್ಯಕ್ತ ಪಡಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ತೇಜಸ್ವಿನಿ- ಗುಡದಯ್ಯ ದಂಪತಿಗೆ ಎರಡು ವರ್ಷದ ಹಾಗೂ ಏಳು ತಿಂಗಳ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಗುಡದಯ್ಯ ಹಾಗೂ ಆತನ ಸಹೋದರಿಯರು ನಿತ್ಯವೂ ಅನಗತ್ಯ ಹಿಂಸೆ ನೀಡುತ್ತಿದ್ದರು ಎನ್ನಲಾಗುತ್ತಿದೆ.
ಸ್ಥಳಕ್ಕೆ ಹರಿಹರ ತಹಶಿಲ್ದಾರ ಪ್ರಥ್ವಿ ಸಾನಿಕಂ ಭೇಟಿ ನೀಡಿದ್ದು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.