×
Ad

ದ್ವೇಷ ಭಾಷಣ ಪ್ರಕರಣ: ಬಜರಂಗದಳ ನಾಯಕ ರಘು ಸಹಚರರ ಬಂಧನ

Update: 2023-07-02 17:04 IST

ರಘು- ಬಜರಂಗದಳ ನಾಯಕ

ಸಕಲೇಶಪುರ, ಜು.2: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂದಿಸಿದಂತೆ ತಲೆಮರೆಸಿಕೊಂಡಿರುವ ಬಜರಂಗದಳ ನಾಯಕ ರಘು ಸಹಚರರು ಎಂದು ಗುರುತಿಸಿಕೊಂಡಿರುವ 5 ಜನರನ್ನು ಪೋಲಿಸರು ರವಿವಾರ ಬಂಧಿಸಿದ್ದಾರೆ.

ಬಜರಂಗದಳ ಸಕ್ರಿಯ ಕಾರ್ಯಕರ್ತನಾಗಿ ಹಾಗೂ ಬೆಳಗೋಡು ಅರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸಮಾಡು ಶ್ರೀಕಾಂತ್, ಶ್ರೀಜೀತ್, ಪ್ರತಾಪ್, ಹಾಗೂ ಇತರೆ ಇಬ್ಬರನ್ನೂ ಬಂದಿಸಲಾಗಿದೆ ಎಂದು ತಿಳಿದು ಬಂದಿದೆ.

ಸಕಲೇಶಪುರ ತಾಲೂಕಿನ ವಿವಿಧ ಪ್ರದೇಶದಿಂದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ರೌಡಿ ಶೀಟರ್ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.‌

ಘಟನೆ ವಿವರ: ಗೋ ಹತ್ಯೆ ತಡೆಯುವಲ್ಲಿ ಪೋಲಿಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಸಕಲೇಶಪುರ ಪಟ್ಟಣದಲ್ಲಿ ಶುಕ್ರವಾರ (ಜೂ.30) ನಡೆದ ಬಜರಂಗದಳದ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ರಘು, ''ತರಕಾರಿ, ಮೀನು ಮಾರಾಟ ಮಾಡಲು ಹಿಂದೂಗಳ ಮನೆಯ ಬಳಿ ಬರುವಂತ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರಗಡೆ ಬರುತ್ತೆ, ನಾವು ಕೂಡ ಗುಂಡು ಹಾರಿಸಬೇಕಾಗುತ್ತದೆ'' ಎಂದು ಬೆದರಿಕೆ ಹಾಕಿದ್ದ.

ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ:

ತಾಲೂಕಿನಲ್ಲಿ ತರಕಾರಿ ಮತ್ತು ಮೀನು ಮಾರುವ ಮುಸಲ್ಮಾನರ ಮೇಲೆ ಗುಂಡು ಹಾರಿಸುವ ಬೆದರಿಕೆ ಹಾಕಿ ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರತಿಭಟನೆಗೆ ಪೋಲಿಸ್ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ.‌ಈ ಪ್ರತಿಭಟನೆಯಲ್ಲೂ ಕಾನೂನು ಉಲ್ಲಂಘನೆಯಾಗಿದೆ. ಪೋಲಿಸರಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ಎಕಾಏಕಿ ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News