×
Ad

ಹಾವೇರಿ | ಅತ್ತಿಗೆ, ಇಬ್ಬರು ಮಕ್ಕಳ ಬರ್ಬರ ಹತ್ಯೆ: ಆರೋಪಿ ಮೈದುನ ಪರಾರಿ

Update: 2023-11-04 11:51 IST

ಗೀತಾ

ಹಾವೇರಿ, ಅ.4: ಸ್ವಂತ ಅಣ್ಣನ ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳನ್ನು ಮೈದುನ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಗೀತಾ ಹೊನ್ನೆಗೌಡ ಮರಿಗೌಡ(35), ಅಕುಲ್ (10) ಮತ್ತು ಅಂಕಿತಾ (6) ಕೊಲೆಯಾದವರು. ಗೀತಾರ ಪತಿ ಹೊನ್ನೆಗೌಡರ ತಮ್ಮ ಕುಮಾರಗೌಡ್ (35) ಕೊಲೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊನ್ನೆಗೌಡ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಆಸ್ತಿ ವಿಚಾರದಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News