ಕಾಂತರಾಜು ವರದಿಗೂ ಒಳಮೀಸಲಾತಿ ಸಮೀಕ್ಷೆಗೂ ಸಂಬಂಧವಿಲ್ಲ : ಎಚ್.ಸಿ.ಮಹದೇವಪ್ಪ
Update: 2025-05-05 20:13 IST
ಎಚ್.ಸಿ. ಮಹದೇವಪ್ಪ
ಬೆಂಗಳೂರು : ಎಚ್.ಕಾಂತರಾಜು ಆಯೋಗದ ವರದಿಗೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮಾಡುತ್ತಿರುವ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ. ಇದು ಪರಿಶಿಷ್ಟಜಾತಿ ಸಮುದಾಯಕ್ಕೆ ಮಾಡುತ್ತಿರುವ ಸಮೀಕ್ಷೆ ಎಂದು ನುಡಿದರು.
ಇದೊಂದು ಐತಿಹಾಸಿಕ ಸಮೀಕ್ಷೆ. ಸದ್ಯ ನಮ್ಮದು ಹೆಚ್ಚು ಜನಸಂಖ್ಯೆ ಇದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಿಖರವಾದ ಅಂಕಿಅಂಶ ಇಲ್ಲ. ಹೀಗಾಗಿ ಸ್ಪಷ್ಟವಾದ ದತ್ತಾಂಶಕ್ಕಾಗಿ ಸಮೀಕ್ಷೆ ನಡೆಸಲಾಗುವುದು. ಯಾರೂ ಅನುಮಾನಪಡುವ ಅಗತ್ಯ ಇಲ್ಲ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ಉಲ್ಲೇಖಿಸಿದರು.