×
Ad

ಬಿಜೆಪಿಯ ರಕ್ಷಣೆಗೆ ಎಚ್‍ಡಿಕೆ, ನಾಲ್ಕು ಹೆಜ್ಜೆ ಮುಂದೆ ನಿಂತಿದ್ದಾರೆ: ಕಾಂಗ್ರೆಸ್

Update: 2024-01-01 20:31 IST

ಬೆಂಗಳೂರು: ʼಬಿಜೆಪಿ ಶಾಸಕ ಯತ್ನಾಳ್ ಮಾಡಿದ 40 ಸಾವಿರ ಕೋಟಿ ಆರೋಪ ನಂಬಲು ಸಾಧ್ಯವಿಲ್ಲʼ ಎಂಬ ಎಚ್‌ ಡಿಕೆ ಹೇಳಿಕೆಗೆ ಪ್ರತಿಕ್ರಿಯಸಿದ ಕಾಂಗ್ರೆಸ್‌,  ‘ಜಗತ್ತಿನ ಏಕೈಕ ಮಹಾ ಪ್ರಾಮಾಣಿಕ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ, ನೀವು ನಂಬಬೇಕೆಂದರೆ ಹಗರಣ ಎಷ್ಟು ಸಾವಿರ ಕೋಟಿ ರೂ.ಗಳದ್ದಾಗಿರಬೇಕು?’ ಎಂದು  ಟೀಕಿಸಿದೆ.

ಸೋಮವಾರ ʼಎಕ್ಸ್‌ʼ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಬಹುಶಃ ತಮಗೆ 40ಸಾವಿರ ಕೋಟಿ ರೂ. ಜುಜುಬಿ ಮೊತ್ತ ಇರಬಹುದೇನೋ, ಸ್ವತಃ ಬಿಜೆಪಿಗರೇ 40 ಸಾವಿರ ಕೋಟಿ ರೂ.ಗಳ ಹಗರಣದ ಬಗ್ಗೆ ಮಾತನಾಡಲು ತಯಾರಿಲ್ಲ, ನಿರಾಕರಿಸಲೂ ತಯಾರಿಲ್ಲ. ಕುಮಾರಸ್ವಾಮಿಯವರು ಮಾತ್ರ ಬಿಜೆಪಿಯ ರಕ್ಷಣೆಗೆ ಬಿಜೆಪಿಗರಿಗಿಂತ ನಾಲ್ಕು ಹೆಜ್ಜೆ ಮುಂದೆ ನಿಂತಿದ್ದಾರೆ’ ಎಂದು ವಾಗ್ದಾಳಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News